
ಕರಜಗಿ:ಸೆ.11:ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಅವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಹೇಳಿದರು
ಅವರು ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಆಯುಷ್ ಆರೋಗ್ಯ ಕ್ಷೇಮ ಕೇಂದ್ರ ಮತ್ತು ಆಯುರ್ವೇದ ಆಸ್ಪತ್ರೆ ಬಳೂರ್ಗಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಇಂದು ಮಕ್ಕಳು,ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಬದುಕಿನಲ್ಲಿ ಯಶಸ್ಸು ಗಳಿಸಲು ಯೋಗ, ಧ್ಯಾನ ಬಹಳ ಮುಖ್ಯವಾಗಿದೆ ಈ. ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತರಬೇತಿ ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಓಂಕಾರ ಪ್ರಾಣಾಯಾಮ ವೃಕ್ಷಾಸನ ತಾಡಾಸನ ಪದ್ಮಾಸನ ಸಿದ್ದಾಸನ ಸೇರಿದಂತೆ ವಿವಿಧ ಯೋಗದ ಆಸನಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀಶೈಲ ಮೇತ್ರಿ, ಹಾಗೂ ಮುಖ್ಯ ಗುರುಗಳು ಸರ್ವ ಶಿಕ್ಷಕ ವೃಂದ ವಿದ್ಯಾರ್ಥಿಗಳಿದ್ದರು.