
ಕಲಬುರಗಿ: ಆ.19:ನಗರದ ಸರಕಾರಿ ಬಾಲಕಿಯರ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿಮಾಣ್-ಮಧ್ಯಾಹ್ನ ಉಪಹಾರ ಯೋಜನೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಅಕ್ಷರ ದಾಸೋಹ ಯೋಜನೆ, ತಾಲೂಕಾ ಪಂಚಾಯತ ಸಯುಕ್ತಾಶ್ರಯದಲ್ಲಿ 9ನೇ ಮತ್ತು 10ನೇ ತರಗತಿ ಮಕ್ಕಳಿಗೂ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ, ಬಾಳೆ ಹಣ್ಣು ಅಥವಾ ಶೇಂಗಾಚಿಕ್ಕಿಯನ್ನು ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ, ಮೇಯರ್ ವಿಶಾಲ ಧರ್ಗಿ, ¸ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಣಧಿಕಾರಿ ಭವಾರಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪಾರ ಆಯುಕ್ತ ಡಾ.ಆಕಾಶ ಎಸ್, ಶಾಲಾ ಶಿಕ್ಷಣ ಉಪನಿರ್ದೇಶಕ ಸಂಕ್ರೇಪಗೌಡ ಬಿರಾದಾರ, Àರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ, ಜಿಲ್ಲಾ ಪಂಚಾಯತ ಶಿಕ್ಷಣಾಧಿಕಾರಿ ರಾಮಲಿಂಗಪ್ಪ, ಡಾ.ಪ್ರಕಾಶ ರಾಠೋಡ, ರಾಜಕುಮಾರ ರೇಡ್ಡಿ, ಗುರುಲಿಂಗಯ್ಯಾ, ವಿಜಯಕುಮಾರ ಬೇಳಮಗಿ ಇದ್ದರು.