ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಕರಜಗಿ:ಮಾ.11:ಅಫಜಲಪುರ ತಾಲೂಕಿನ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2022-23 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಅಮರಗೊಂಡ ಸರ್ ಉಪನ್ಯಾಸಕರು ಸರಕಾರಿ ಪಿ ಯು ಕಾಲೇಜ್ ಗಬ್ಬುರ. ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಮುಖ್ಯ. ಅದರ ಸಾಧನೆಗೆ ಗುರುಗಳ ಮಾರ್ಗದರ್ಶನ ಅವಶ್ಯ ವಾಗಿ ಬೇಕು ಎಂದರು. ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸತ್ಕಾರಿಸಲಾಯಿತು ಕ್ರೀಡಾ ಸಾಧಕ ವಿದ್ದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಮೇಡಲ ನೀಡಲಾಯಿತು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ಯಾಡ ಮತ್ತು ಪೆನ್ ನೀಡಿ ಶುಭ ಕೋರಲಾಯಿತು ಕಿತ್ತೂರು ಚನ್ನಮ್ಮ ಶಾಲೆ ಚೌಡಾಪುರ ಪ್ರಾಂಶುಪಾಲರಾದ ಶ್ರೀ ಪಾಸೋಡಿ ಸರ್. ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಳಗನೂರ ಕಂಪ್ಯೂಟರ್ ಶಿಕ್ಷಕರಾದ ಶ್ರೀ ಸಿದ್ಧಾರೋದ ಸರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಶರಣಬಸವಪ್ಪ ಪಾಟೀಲ ಶ್ರೀ ಸುನೀಲಕುಮಾರ ಶ್ರೀ ರವಿಕುಮಾರ್ ಶ್ರೀ ಮೊಹಮ್ಮದ ಶಫಿ ಕುಮಾರಿ ಜಯಶ್ರೀ ಹರಕುಡೆ ಸನಾ ಬೇಗಂ ಹಾಜರಿದ್ದರು ಶ್ರೀ ಕಾಶಿನಾಥ ಬಗಲಿ ನಿರೂಪಿಸಿದರು ಶ್ರೀ ಬಾಬು ನಡುವಿನಕೇರಿ ಸ್ವಾಗತಿಸಿದರು ಶ್ರೀ ರಮೇಶ ಮಿರಜಕರ ಇನ್ನಿತರ ಉಪಸ್ಥಿತರಿದ್ದರು