ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ

ಬಳ್ಳಾರಿ, ಜ.02: ಜಿಲ್ಲೆಯ ಹೊಸಪೇಟೆಯ ವಿಭಾಗದ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಯೋಜನೆಯ ಅಡಿಯಲ್ಲಿ ರಿಯಾಯಿತಿ ಬಸ್ ಪಾಸ್‍ಗಳನ್ನು ವಿತರಿಸಲಾಗುತ್ತಿದ್ದು, ಹೊಸಪೇಟೆ ಬಸ್ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ.ಸೇವಾ ಸಿಂಧು ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸಪೇಟೆ ವಿಭಾಗದ ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಸಂಡೂರು, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕಂಪ್ಲಿ ಹಾಗೂ ಹರಪನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್‍ಪಾಸ್‍ಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ, ಈ ಬಗ್ಗೆ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸೇವಾ ಸಿಂಧು ಫ್ಲೋ ಚಾರ್ಟ್ ಪ್ರದರ್ಶಿಸಲಾಗಿದ್ದು ಕಂಪ್ಯೂಟರ್ ಸೆಂಟರ್‍ಗಳಿಗೆ ಹೋಗಿ, ದುಂದುವೆಚ್ಚ ಮಾಡದೇ ತಮ್ಮ ಫೋನ್‍ಗಳನ್ನೇ ಉಪಯೋಗಿಸಿ ಆನ್‍ಲೈನ್ ಮೂಲಕ ಬಸ್‍ಪಾಸ್ ಪಡೆದುಕೊಳ್ಳಬಹುದು.