ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಚಾಲಕನಿಗೆ ಸುರೇಶ್ ತರಾಟೆ


ತುಮಕೂರು,ಜ.೯- ನಿಗದಿತ ಸಮಂiiಕ್ಕೆ ಬಸ್‌ಗಳು ಬರುವುದಿಲ್ಲ. ಬಂದರೂ ಕೆಲವೊಂದು ನಿಲ್ದಾಣಗಳಲ್ಲಿ ಚಾಲಕರು ಬಸ್ ನಿಲ್ಲಿಸುವುದೇ ಇಲ್ಲ. ಇಂತಹ ಘಟನೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೊಳಾಲ ಸಾಕ್ಷಿಯಾಗಿದೆ.
ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸದೆ ಹೊರಟುಹೋದ ಬಸ್‌ನ್ನು ಅಡ್ಡಗಟ್ಟಿ ಚಾಲಕನನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಚಾಲಕನಿಗೆ ಬೆವರಿಳಿಸಿದ್ದಾರೆ.
ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐಕೆ ಕಾಲೋನಿಯ ರಾಜ್ಯ ಹೆದ್ದಾರಿಯಲ್ಲೇ ಬಸ್‌ನ್ನು ತಡೆದು sಸುರೇಶ್ ಕುಮಾರ್, ಕಂಡೆಕ್ಟರ್ ಹಾಗೂ ಚಾಲಕನಿಗೆ ಬೆಂಡೆತ್ತಿದ್ದಾರೆ.
ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೈತೋರಿಸಿ ನಿಲ್ಲಿಸುವಂತೆ ಮನವಿ ಮಾಡಿದರೂ ಅದನ್ನು ಧಿಕ್ಕರಿಸಿ ಬಸ್ ನಿಲ್ಲಿಸದೆ ತೆರಳಿದ್ದಾನೆ.
ಇದೇ ಮಾರ್ಗವಾಗಿ ಬೆಂಗಳೂರಿನಿಂದ ಮಧುಗಿರಿ ಕಡೆಗೆ ಬರುತ್ತಿದ್ದ ಸಚಿವ ಸುರೇಶ್ ಕುಮಾರ್ ಬಸ್ ನಿಲ್ಲಿಸಿದ್ದಾರೆ. ವಿದ್ಯಾರ್ಥಿಗಳು ಕೈತೋರಿಸಿದರೂ ಬಸ್ ನಿಲ್ಲಿಸದ ಚಾಲಕನಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.