ವಿದ್ಯಾರ್ಥಿಗಳಿಗೆ ಪ್ರಶಸ್ತಿ


ಬ್ಯಾಡಗಿ,ಜ.5- ಕಳೆದ ಡಿಸೆಂಬರ್ ತಿಂಗಳಲ್ಲಿ ಗಂಗಾವತಿಯಲ್ಲಿ ಡ್ರೀಮ್ ವರ್ಡ್ ಮಾರ್ಷಲ್ ಆರ್ಟ್’ನವರು ಆಯೋಜಿಸಿದ್ದ ಮೂರನೇ ರಾಷ್ಟ್ರೀಯ ಆನ್’ಲೈನ್ ಕರಾಟೆ ಕಥಾ ಸ್ಪರ್ಧೆಯಲ್ಲಿ ಬ್ಯಾಡಗಿಯ ಡಾ. ಬಿ.ಆರ್. ಅಂಬೇಡ್ಕರ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದಿದ್ದಾರೆ.
ಅಕ್ಷತಾ ಬಿ ಪಾಟೀಲ, ಲಿಖಿತಾ ಜಿ ಹೆಸರೂರ, ಸಂಪ್ರೀತಿ ಎಸ್ ಪಡ್ಕಿಸ್ ಕಥಾದಲ್ಲಿ ಪ್ರಥಮ ಸ್ಥಾನ, ಐಶ್ವರ್ಯ ಬಿ ಪಾಟೀಲ ಹಾಗೂ ಲಿಂಗರಾಜ ಜಿ ಹೆಸರೂರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವಿಜೇತ ಕರಾಟೆ ಪಟುಗಳನ್ನು ಡಾ. ಬಿ.ಆರ್. ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಜ್ಯ ಎಸ್ಸಿ,ಎಸ್ಟಿ ಆಯೋಗದ ಅಧ್ಯಕ್ಷ ಹಾಗೂ ಹಾವೇರಿಯ ಶಾಸಕ ನೆಹರೂ ಓಲೇಕಾರ ಅವರು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕರಾಟೆ ಮಾಸ್ಟರ್ ಪ್ರಶಾಂತ, ತರಬೇತುದಾರಿಣಿ ಯಲ್ಲಮ್ಮ ಡಿ.ಸಿ. ಹಾಗೂ ಇನ್ನಿತರರು ಉಪಸ್ಥಿತರಿದ್ದರು.