ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ

ಕುಂದಗೋಳ ಜೂ.28 : ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮವು ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಪ್ರೌಢಶಾಲೆಯಲ್ಲಿ ಗ್ರಾಮ ವಿಕಾಸ ನೌಕರರ ಸಮಿತಿಯಿಂದ ಜರುಗಿತು.
ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಕಾವ್ಯಾ ಹುಬ್ಬಳ್ಳಿ, ದ್ವಿತೀಯ ಸ್ಥಾನ ಪಡೆದ ಗೌರಮ್ಮ ದೊಡಮನಿ ಹಾಗೂ ತೃತೀಯ ಸ್ಥಾನ ಪಡೆದ ರಾಜೇಶ್ವರಿ ಮಾಶಟ್ಟಿ ಅವರಿಗೆ ನಗದು ನೀಡಿ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುರಸ್ಕøತರು ಮಾತನಾಡಿ ತಮ್ಮ ಶ್ರೇಯಸ್ಸಿಗೆ ಕಾರಣರಾದ ತಂದೆ, ತಾಯಿ ಹಾಗೂ ಗುರುವೃಂದವನ್ನು ನೆನದರು. ನಂತರ ವಿಕಾಸ ಸಮಿತಿ ಸದಸ್ಯ ಹಾಗೂ ಶಿರೂರ ಶಾಲಾ ನಿವೃತ್ತ ಮುಖ್ಯಶಿಕ್ಷಕ ಮೌಲಾಸಾಬ ಖುದ್ದುಬಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತ ಮೌಲಾಸಾಬ ಅವರು ಮಾತನಾಡಿ ನಮ್ಮ ಸಮಿತಿಯಿಂದ ನಮ್ಮ ಗ್ರಾಮದ ಮಕ್ಕಳಿಗೆ ಕಳೆದ 15 ವರ್ಷಗಳಿಂದ ಈ ಪುಸ್ಕಾರ ಏರ್ಪಡಿಸುತ್ತ ಬಂದಿದ್ದು, ನಮ್ಮ ಮಕ್ಕಳು ಏಳ್ಗೆಕಾಣಲೆಂಬ ನಮ್ಮ ಸಮಿತಿ ಆಶಯ ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮಂಗಲಾ ಹೆಗಡೆ ಅವರು ಮಾತನಾಡಿ ನಮ್ಮ ಶ್ರೇಯಸ್ಸು ನಮ್ಮ ಸುತ್ತಲಿನ ಸಮಾಜಕ್ಕೆ ಮಾದರಿಯಾಗುವ ಜೊತೆಗೆ ಹೆಮ್ಮೆ ಆಗುತ್ತದೆ ಎಂದರು. ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರೋ: ಸಿ.ಎನ್ ಜಗದೇನವರ ಮಾತನಾಡಿ ನಮ್ಮ ಸಮಿತಿ ಬೆಳೆದು ಬರಲು ನಮ್ಮ ಸದಸ್ಯರು ಹಾಗೂ ಗ್ರಾಮಸ್ಥರು ಮತ್ತು ಪ್ರೌಢಶಾಲಾ ಗುರುವೃಂದವು ಬಹಳ ಸಹಕಾರ ನೀಡುತ್ತಿದ್ದು ಈ ಪುರಸ್ಕಾರ ಕಾರ್ಯಮಿತಿಯನ್ನು ಹೆಚ್ಚಿಸಿ, ತಾಲೂಕು ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದರು.
ಸಮಿತಿ ಸದಸ್ಯ ನೇಕಾರ, ಎಸ್‍ಡಿಎಂಸಿ ಉಪಾಧ್ಯಕ್ಷ ವಿರುಪಾಕ್ಷಪ್ಪ ಹಂಚಿನಾಳ, ಸಮಿತಿ ಕಾರ್ಯದರ್ಶಿ ಎನ್.ಆರ್.ಮೆಣಸಿನಕಾಯಿ, ಖಜಾಂಚಿ ಬಿ.ಎಲ್.ಪಾಟೀಲ, ಸಹಕಾರ್ಯದರ್ಶಿ ಆರ್.ಬಿ ಗಡ್ಡದ ಸೇರಿದಂತೆ ಗ್ರಾಮ ವಿಕಾಸ ಸಮಿತಿ ಇತರೆ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ಮುಖಂಡರಿದ್ದರು.