
ಬೀದರ : ಆ.20:ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಪುನಶ್ಚೇತನ ಕಾರ್ಯಗಾರವನ್ನು ಸಸಿಗೆ ನೀರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಮಹಾವಿದ್ಯಾಲಯದ ಬೀದರ ಜಿಲ್ಲೆಯ ಅತಿ ಪ್ರತಿಷ್ಠಿತ ಪುರಾತನ ಮಹಾವಿದ್ಯಾಲಯ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉನ್ನತ ಹುದ್ದೆಗಳು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ತಾವು ಸಹ ಇಲ್ಲಿ ಪ್ರವೇಶ ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತಮ್ಮ ಗ್ರಾಮ ಹಾಗೂ ಪಾಲಕರ ಹಾಗೂ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಬೇಕು ಆಗ ಮಾತ್ರ ಭೂತಾಯಿ ಮೆಚ್ಚಿಕೊಳ್ಳುತ್ತಾಳೆ ಎಂದು ಮಾರ್ಮಿಕವಾಗಿ ನುಡಿದರು.
ಅದೇ ರೀತಿ ಮಹಾವಿದ್ಯಾಲಯ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ಈ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯು ಐ.ಜಿ.ಪಿ., ಎಂ.ಎಲ್.ಎ. ಎಂ.ಪಿ. ಪ್ರಧಾನ ಕಾರ್ಯದರ್ಶಿಗಳು ಹಾಗೂ ತಾಲೂಕಾ ಮಟ್ಟದಲ್ಲಿ ತಾಲೂಕಾ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗಳಲ್ಲಿ ವಿಜಯಶಾಲಿಗಳಾಗಿ ಸಮಾಜ ಸೇವೆ ಹಾಗೂ ಬಡ ವರ್ಗದವರಿಗೆ ಧನ ಸಹಾಯ ಮಾಡಿ ಅಧ್ಯಯನ ಮಾಡಲು ಪ್ರೋತ್ಸಾಹ ಮಾಡಿದ ಕೀರ್ತಿ ನಮ್ಮ ಮಹಾವಿದ್ಯಾಲಯಕ್ಕೆ ಇದೆ ಎಂದು ಪ್ರಥಮ ವರ್ಷದ ವಿದ್ಯಾರ್ಥಿ ಆಶಯ ನುಡಿಗಳನ್ನು ಹೇಳಿ ಪ್ರೊತ್ಸಾಹಿಸಿದರು.
ನಮ್ಮ ಮಹಾವಿದ್ಯಾಲಯದ ಎನ್.ಸಿ.ಸಿ., ಎನ್.ಎಸ್.ಎಸ್. ಯುತ್ ರೆಡ್ಡ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಗ್ರಂಥಾಲಯ ವಿಭಾಗ, ಕಛೇರಿ ವಿಭಾಗ, ಕ್ರೀಡಾ ವಿಭಾಗ, ಗಣಕ ಯಂತ್ರ ವಿಭಾಗದ ಮುಖ್ಯಸ್ಥರುಗಳು ಮಹಾವಿದ್ಯಾಲಯದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಅದೇ ರೀತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸದರೆ, ಕಾರ್ಯಕ್ರಮವನ್ನು ಶ್ರೀ ಬಸವರಾಜ ಬಿರಾದಾರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.