ವಿದ್ಯಾರ್ಥಿಗಳಿಗೆ ಪಾಠಹೇಳಿಕೊಟ್ಟ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ.ಜ.೧; ಕೊವಿಡ್ ನಿಂದಾಗಿ ಮಕ್ಕಳ ಭವಿಷ್ಯ ಅತಂತ್ರವಾಗಿತ್ತು.ಆದರೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಶಾಲೆ ಪ್ರಾರಂಭವಾಗಿದೆ ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಮಕ್ಕಳ ಪಾಲಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭರವಸೆ ನೀಡಿದರು.ಇಂದು ಶಾಲೆ ಆರಂಭ ಹಿನ್ನಲೆ ನಗರದ ಸರ್ಕಾರಿ ಪ್ರೌಢ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗಳು ನಿಮ್ಮ ಮಕ್ಕಳನ್ನ ಧೈರ್ಯದಿಂದ ಶಾಲೆಗೆ ಕಳುಸಿಕೊಡಿ.ನಾವು ನಿಮ್ಮ ಜೊತೆ ಇರುತ್ತೇವೆ.ಸುರಕ್ಷಿತವಾಗಿ ವಿದ್ಯಾದಾನ ಮಾಡಲು ನಾವು ಸಿದ್ದ.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಆಗದಂತೆ ನೋಡಿಕೊಳ್ಳುತ್ತೇವೆ.ಶಾಲೆಗಳಲ್ಲಿ ಸ್ಯಾನಿಟೈಸ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ.ದೇಹ ಉಷ್ಣಾಂಶದಲ್ಕಿ ಹೆಚ್ಚು ಕಡಿಮೆ ಕಂಡುಬಂದರೆ ವ್ಯವಸ್ಥೆ ಮಾಡಲಾಗಿದೆ ಎಂದರು.ಇದೇ ವೇಳೆ ಜಿಲ್ಲಾಧಿಕಾರಿಗಳು ಮಕ್ಕಳಿಗೆ ಪಾಠಮಾಡುವ ಮೂಲಕ ಗಮನಸೆಳೆದರು.