ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ

ಕಲಬುರಗಿ:ಮಾ.25:ನಿಂಬರ್ಗಾ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು

ಭೀಮರತ್ನ ಸಾಂಸ್ಕøತಿಕ ಕಲಾ ಸೇವಾ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸ್ಕೋರಿಂಗ್ ಪ್ಯಾಕೇಜ್ ವಿಶ್ಲೇಷಣೆ ಮತ್ತು ಪರೀಕ್ಷಾ ಎದುರಿಸುವ ಕುರಿತು ಉಪನ್ಯಾಸ, ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನಿಂಬರ್ಗಾ ಪ್ರೌಢಶಾಲೆಯ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಪರಿಣಿತ ಶಿಕ್ಷಣ ತಜ್ಞ ಕೆ,ಎಮ್,ವಿಶ್ವನಾಥ ಮಾರತೂರ ಅವರಿಂದ ಮಾರ್ಗದರ್ಶನ ನೀಡಲಾಯಿತು.

ನಿಂಬರ್ಗಾ ವೀರಕ್ತ ಮಠದ ಪೂಜ್ಯ ಗುರುಗಳಾದ ಶಿವಲಿಂಗ ದೇವರು ಕಾರ್ಯಕ್ರಮದಲ್ಲಿ ಸರಸ್ವತಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮಾತನಾಡಿ, ಓದುವುದರ ಮೂಲಕ ಪ್ರಯತ್ನ ಪಡಬೇಕು.ಎಂದಿಗೂ ಫಲಿತಾಂಶದ ಬಗ್ಗೆ ಯೋಚಿಸಬೇಡಿ. ನಿಮ್ಮ ಕೈಯ್ಯಲ್ಲಿರುವುದು ಕೇವಲ ಸತತ ಪ್ರಯತ್ನ ಮಾತ್ರ. ನಿಮ್ಮ ಉತ್ತಮ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ನಕಾರಾತ್ಮಕ ಆಲೋಚನೆಗಳಿಗೆ ಎಂದಿಗೂ ಅವಕಾಶವನ್ನು ಕೊಡಬೇಡಿ. ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಿರಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಬಬಲೇಶ್ವರ ಕ್ಷೇತ್ರದ ಪೂಜ್ಯ ಗುರುಗಳಾದ ಶ್ರೀ ವಿವೇಕಾನಂದ ಶ್ರೀಗಳು,, ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶಂಕರ ಡಾoಗೆ ರವರು ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಈರಣ್ಣ ನಾಗಶೆಟ್ಟಿ, ಶ್ರೀ,ದತ್ತಾ,ಡಿ ಖರ್ಚನ,ಪ್ರಕಾಶ, ಸಿಂಧೆ, ಜೈಭೀಮ್ ಬಿಲ್ಕರ, ಶಿಕ್ಷಕ ಅನಿಲ್ ಹಾಗೂ ಇತರರಿದ್ದರು

ಈ ವೇಳೆ ಶಿಕ್ಷಕಿ ಸಂಗಮ್ಮ ರವರು ನಿರೂಪಿಸಿದರು,
“ಭೀಮರತ್ನ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆಯ”ಅಧ್ಯಕ್ಷರಾದ ಶ್ರೀ ರೇವಣಸಿದ್ದ ಖರ್ಚನ ರವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು