ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.17:  ನಗರದ 36ನೇ ವಾರ್ಡಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಡಿ ಅರುಣ್ ಕುಮಾರ್ ಇವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ 300 ನೋಟ್ ಪುಸ್ತಕಗಳನ್ನು  ವಿತರಿಸಿದರು.
ಸಮಾಜಸೇವಕ ಕೊರಲಗುಂದಿ ವಿ. ದೊಡ್ಡಕೇಶ್ವರಡ್ಡಿ, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜೆ. ವಿ. ಮಂಜುನಾಥ ಮೊದಲಾದವರು ಇದ್ದರು.
ಅನೇಕರು ಆಡಂಬರದ ಹುಟ್ಟುಹಬ್ಬಗಳನ್ನು ಆಚರಿಸುತ್ತಿರುವುದು ನಮಗೆಲ್ಲ ಕಾಣುತ್ತಿದೆ, ಆದರೆ ಅರುಣ್ ಕುಮಾರ್  ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಹುಟ್ಟುಹಬ್ಬ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಮಾದರಿಯಾಗಿದೆ ಇದೇ ರೀತಿ ಅನೇಕ ಶಿಕ್ಷಣ ಪ್ರೇಮಿಗಳುಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಮಂಜುನಾಥ್ ಕರೆ ನೀಡಿದರು.

One attachment • Scanned by Gmail