ವಿದ್ಯಾರ್ಥಿಗಳಿಗೆ ತ್ವರಿತವಾಗಿ ಶಿಕ್ಷಣ ಸಾಲ ಮಂಜೂರಾತಿ

ದಾವಣಗೆರೆ ಜ.17; ಶಿಕ್ಷಣ ಸಾಲ ನೀಡುವ ಪ್ರಮಾಣ ಹೆಚ್ಚಿಸಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಸಾಲಸೌಲಭ್ಯಗಳ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ  ಅವರು  ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲೆಯ ಬ್ಯಾಂಕ್‍ಗಳ ಜಿಲ್ಲಾ ಸಮನ್ವಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.7295  ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಮಂಜೂರು ಮಾಡಲಾಗಿದ್ದು, ಈ ಪೈಕಿ  4273  ವಿದ್ಯಾರ್ಥಿಗಳಿಗೆ ಸಾಲ ವಿತರಿಸಲಾಗಿದೆ. ಶೈಕ್ಷಣಿಕ ಸಾಲ ಪ್ರಮಾಣ ಹೆಚ್ಚಳದ ಜೊತೆಗೆ ಹೆಚ್ಚು ಜನರಿಗೆ ಶಿಕ್ಷಣ ದೊರಕಬೇಕು ಹಾಗೂ ತ್ವರಿತವಾಗಿ ಸಾಲ ವಿತರಣೆಗೆ ಕ್ರಮವಹಿಸುವಂತೆ ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖೆಗಳು ವಿದ್ಯಾರ್ಥಿಗಳು, ದುರ್ಬಲ ವರ್ಗದ ವಿವಿಧ ಯೋಜನೆಯ ಫಲಾನುಭವಿಗಳ ಶೂನ್ಯ ಬ್ಯಾಲೆನ್ಸ ಖಾತೆಗಳನ್ನು ತೆರೆಯಲು ಆದ್ಯತೆ ನೀಡಬೇಕು. ಈ ಕುರಿತಂತೆ ಯಾವುದೇ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.  ಮಂಡಕ್ಕಿ ಭಟ್ಟಿಗಳಿಗೆ ಸಾಲ ಸೌಲಭ್ಯಗಳ ಕುರಿತು  ಮಾಹಿತಿ ನೀಡಿ ಅವರಿಗೆ ಸಾಲ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಗಮನ ಹರಿಸಬೇಕು ಎಂದರು.  ರೈತರಿಗೆ, ಸಣ್ಣ ಕೈಗಾರಿಕೆ ಮತ್ತು ಕುಶಲ ಕರ್ಮಿಗಳಿಗೆ, ಮಂಡಕ್ಕಿ ಭಟ್ಟಿ ಸೇರಿದಂತೆ ಸಣ್ಣ ಸಣ್ಣ ಉದ್ಯಮಿಗಳಿಗೆ ಸಾಲ ನೀಡಿ ಆರ್ಥಿಕ ಸ್ವಾವಲಂಬನೆ ಒತ್ತು ನೀಡಬೇಕು.  ಬ್ಯಾಂಕುಗಳಲ್ಲಿ ನೀಡುವ ವಿವಿಧ ಸಾಲ ಸೌಲಭ್ಯಗಳ ಕುರಿತು  ಮಾಹಿತಿ ನೀಡುವುದು ಮತ್ತು  ಗ್ರಾಹಕರೊಂದಿಗೆ  ಸಹನೆಯಿಂದ ನಡೆದುಕೊಳ್ಳುವುದು ಅಗತ್ಯ ಮಾಹಿತಿ ನೀಡಲು ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಚನ್ನಪ್ಪ ಮಾತನಾಡಿ, ಬ್ಯಾಂಕ ಅಧಿಕಾರಿಗಳು ಬ್ಯಾಂಕಿನ ಎಲ್ಲಾ ಕಾಂiÀರ್iಚಟುವಟಿಕೆಗಳ ಕುರಿತು ಮಾಹಿತಿ ನೀಡಬೇಕು, ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.ಸಭೆಯಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ಜಿ.ಜಿ. ದೊಡ್ಡವiನಿ, ಕೆನರಾ ಬ್ಯಾಂಕ್  ಅಧಿಕಾರಿ ರವಿಕಲಾ. ಹೆಚ್,  ಆರ್.ಬಿ.ಐ ಅಧಿಕಾರಿ ಮುರಳಿ ಮೊಹನ್ ಪಥಕ್, ನಬಾರ್ಡ ಅಧಿಕಾರಿ ರಶ್ಮಿ ರೇಖಾ ಹಾಗೂ ವಿವಿಧ ಬ್ಯಾಕುಗಳ ಅಧಿಕಾರಿ ಮತ್ತು ಮ್ಯಾನೇಜರ್‍ಗಳು ಉಪಸ್ಥಿರಿದ್ದರು.