ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆಗೆ ಸೂಚನೆ

ಚನ್ನಮ್ಮನ ಕಿತ್ತೂರ,ನ.23:ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ಎನ್‍ಡಬ್ಲೂಕೆಎಎಸ್‍ಆರ್‍ಟಿಸಿ ಬಸ್ಸ ನಿಲ್ದಾಣಾಧಿಕಾರಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಎಚ್ಚರಿಕೆ ನೀಡಿದರು.
ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಹೆಚ್ಚಿನ ಶಿಕ್ಷಣಕ್ಕಾಗಿ ಧಾರವಾಡ-ಬೆಳಗಾವಿ ಹೋಗುವ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ ಬಸ್ ಸಮಸ್ಯೆ ಕುರಿತು ಚರ್ಚಿಸಿ ಮಾತನಾಡಿದರು.
ಬಹಳ ದಿನಗಳಿಂದ ಈ ಸಮಸ್ಯೆ ಇದ್ದೇ-ಇದೆ ಇದ್ದಕ್ಕೇನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು. ಎಂದು ಅಧಿಕಾರಿಗಳಿಗೆ ಹೇಳಿದರು ಅದಕ್ಕೆ ಉತ್ತರಿಸಿದ ಅಧಿಕಾರಿ ಮೇಲಧಿಕಾರಿಗಳ ಜೊತೆ ಚರ್ಚಿಸಿ ಇನ್ನೂ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಮಾಡಿಸಲಾಗುವುದು ಎಂದರು.
ಈ ವೇಳೆ ಸುನೀಲ ಘೀವಾರಿ, ಅಶಪಾಕ್ ಹವಾಲ್ದಾರ, ರೈಮತ್ ಸೌದಾಗರ್, ಪ್ರವೀಣಗೌಡ ಜಕ್ಕನಗೌಡರ, ಸಿಸಿಪಾಟೀಲ, ಪಿಎಸ್‍ಐ ಪ್ರವೀಣ ಗಂಗೋಳ, ವಿದ್ಯಾರ್ಥಿಗಳು- ಪಾಲಕರು, ಸಾರ್ವಜನಿಕರು ಇನ್ನಿತರರಿದ್ದರು.