ವಿದ್ಯಾರ್ಥಿಗಳಿಗೆ ತರಬೇತಿ

ಧಾರವಾಡ,ಜ29: ಕೆಎಲ್‍ಎಸ್ ವಿಡಿಐಟಿ ಹಳಿಯಾಳದ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಧಾರವಾಡದ ನೆಲ ಮತ್ತು ಜಲ ಸಂರಕ್ಷಣಾ ಸಂಸ್ಥೆ (ವಾಲ್ಮಿ)ಯಲ್ಲಿ ಇತ್ತೀಚೆಗೆ ಏಳು ದಿನಗಳ ಕಾಲ ತರಬೇತಿಯನ್ನು ಪಡೆದುಕೊಂಡರು.

ಐದನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯಲ್ಲಿ ನೀರಿನ ಸಮರ್ಪಕ ನಿರ್ವಹಣೆ, ನೀರಾವರಿ ವ್ಯವಸ್ಥೆ ರಚನೆ ಹಾಗೂ ವಿನ್ಯಾಸ, ಗುಣಮಟ್ಟ ನಿಯಂತ್ರಣ, ನೀರಾವರಿ ವ್ಯವಸ್ಥೆಯ ಅಂದಾಜು, ನೀರಾವರಿ ನಿಯಮ 1965, ಈ ವಿಷಯಗಳ ಕುರಿತು ತರಬೇತಿಯನ್ನು ಪಡೆದುಕೊಂಡರು. ವಾಲ್ಮೀ ಸಂಸ್ಥೆಯ ನಿರ್ದೇಶಕ ಪೆÇ್ರ. ಬಿ ವೈ ಬಂಡಿವಡ್ಡರ್, ಪೆÇ್ರ. ಚೆನ್ನಯ್ಯ ಕೊಪ್ಪದ್, ಪೆÇ್ರ.ಎಂ. ನಾರಾಯಣ, ಡಾ.ವಿ. ಐ. ಬೇಣಗಿ, ಡಾ. ಪಿ. ಎಸ್. ಕಣ್ಣನವರ್, ಪೆÇ್ರ. ಮಂಜುನಾಥ ಡಬ್ಲ್ಯೂ, ಸದಾನಂದ, ವೈಭವ ದೇಸಾಯಿ, ಸುರೇಶ್ ಕುಲಕರ್ಣಿ, ಪೆÇ್ರ. ಹೆಚ್. ಬಿ. ಮಲ್ಲೇಶ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವು ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಹೇಳಿದರು. ತರಬೇತಿ ಕಾರ್ಯಕ್ರಮವನ್ನು ಪೆÇ್ರ. ಸೀಮಾ ಬಸರಿಕಟ್ಟಿ ಸಂಯೋಜಿಸಿದ್ದರು.