ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

????????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ:ನ.11:ಬಡವರ ದೀನ ದಲಿತರು ಆರ್ಥಿಕವಾಗಿ ಸಾಮಾಜಿಕವಾಗಿ ಬೆಳೆದು ನಿಲ್ಲಲು ಮಹಿಳಾ ಸಂಘಗಳ ಮೂಲಕ ಮೂಲಬೂತ ಸೌಲಭ್ಯಗಳ ಜತೆಗೆ ವಿವಿಧ ರೀತಿ ಸಹಾಯ ನೀಡುವ ಮೂಲಕ ಧರ್ಮಸ್ಥಳ ಮಂಜುನಾಥ ಗ್ರಾಮಿಣಾಭಿವೃದ್ಧಿ ಸಂಘ ತಾಲೂಕಿನಲ್ಲಿ ಉತ್ತಮ ಸಾಮಾಜಿಕ ಸೇವೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

ರಾಜ್ಯದಲ್ಲಿ ಮಹಿಳಾ ಒಕ್ಕೂಟಗಳನ್ನು ಸ್ಥಾಪಿಸಿ ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಸ್ವಾವಲಂಭಿ ಜೀವನ ನಡೆಸುವಂತೆ ಪ್ರೇರೆಪಿಸುವ ನಿಟ್ಟಿನಲ್ಲಿ ಮಹಿಳೆಯರ ಆತ್ಮಸ್ಥೈರ್ಯ ತುಂಬಿದಂತಾಗಿದೆ ಕಾರಣ ಇದೇ ರೀತಿ ಎಲ್ಲ ಸಂಘ ಸಂಸ್ಥೆಗಳು ಸಮಾಜ ಮುಖಿಯಾಗಿ ಫಲಾಪೇಕ್ಷೇ ಇಲ್ಲದೇ ಇಂತಹ ಸಾಮಾಜಿಕ ಸೇವೆ ಮಾಡಿದಲ್ಲಿ ಮಾದರಿಯ ದೇಶಕಟ್ಟಲು ಸಾಧ್ಯ ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಬಸವರಾಜ ಅಸ್ಕಿ, ಸೋಮನಾಥ ಕಳ್ಳಿಮನಿ, ಸಾಹಿತಿ ವೈದ್ಯ ಡಾ, ಎಎ ಮುಲ್ಲಾ ಅವರು ಮಾತನಾಡಿ. ರಾಜಕೀಯದವರು ತಮ್ಮ ಸ್ವಾರ್ಥಕ್ಕೆ ಸಿರೇ, ಅಕ್ಕಿ, ಸೇರಿದಂತೆ ಇತರೇ ವಸ್ತುಗಳನ್ನು ದಾನ ಮಾಡಿ ಹೆಸರು ಮಾಡಿಕೊಳ್ಳುತ್ತಾರೆ ಎಂದರೆ ಅದ ನಿಜವಾದ ಸಮಾಜಿಕ ಸೇವೆಯಲ್ಲ ಯಾವೂದೇ ಸ್ವಾರ್ಥ ಭಾವನೆಯಿಲ್ಲದೇ ಸ್ವಚ್ಛ ಮನಸ್ಸಿನಿಂದ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಉದ್ಯೋಗದ ಜತೆ ಹಲವಾರು ರೀಯಿಲ್ಲಿ ಯಾವೂದೇ ಜಾತಿ ಮತ, ಪಂಥ, ಬಡವ ಶ್ರೀಮಂತ ಎನ್ನದೇ ಮೂಲಬೂತ ಸೌಲಭ್ಯಗಳ ನೀಡುವ ಮೂಲಕ ಜನಸೇವೆ ಮಾಡುತ್ತಿರುವ ಸಂಸ್ಥೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಇಡೀ ವಿಶ್ವಕ್ಕೆನ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ಹೊನ್ನಪ್ಪ, ಶಿಕ್ಷಣ ಸಂಯೋಜಕಿ ವಿಜಯಲಕ್ಷ್ಮೀ ಚಿಲ್ಲಾಶೇಟ್ಟರ,ಸದಸ್ಯೆಯರಾದ ಮಂಜುಳಾ ಕೆಸರಟ್ಟಿ, ಶೈಲಜಾ ಚಿನಿವಾರ, ಪದ್ಮಶ್ರೀ ಲೋಕರೆ, ಗುರುಬಾಯಿ, ಮೇಘನಾ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.ಬಾಳಪ್ಪ ತಳವಾರ ನಿರೂಪಿಸಿದರು.ಕವಿತಾ ತುರುಮುರಿ ವಂದಿಸಿದರು.