ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು

ನ್ಯಾಮತಿ.ಜು.೧೯ : ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರ ಬೇಕು, ಯಾರಿಗೆ ಗುರಿ ಇರುವುದಿಲ್ಲವೋ ಅವರ ಜೀವನ ಹಳಿ ತಪ್ಪಿ ಹೋಗಲಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕಲಿತು ಸತ್‌ಪ್ರಜೆಗಳಾಗ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ತಾಲೂಕಿನ ಕುಂಕುವ ಗ್ರಾಮದಲ್ಲಿ ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ತಮ್ಮ ಜೀವನದಲ್ಲಿ ಸಂಸ್ಕಾರವನ್ನು ಅಳವಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ ಶಾಸಕರು, ವಿದ್ಯಾರ್ಥಿಗಳು ರಾಷ್ಟçಪ್ರೇಮ,ರಾಷ್ಟಿçÃಯ ಚಿಂತನೆ, ಸೇವಾ ಮನೋಭಾವನೆ ಬೆಳೆಸಿಕೊಂಡು ದುಶ್ಚಟಗಳಿಂದ ದೂರ ಉಳಿಯುವಂತೆ ಸೂಚಿಸಿದರು.ನಾನು ಶಿಕ್ಷಣ ಎಂಬ ಮೂರಕ್ಷರ ಕಲಿಯದಿದ್ದರೇ ನಾನು ಏನಾಗುತ್ತಿದ್ದೇನೋ ಗೊತ್ತಿಲ್ಲಾ ಎಂದು ಮನದಾಳದ ಮಾತನ್ನಾಡಿದ ಶಾಸಕರು, ಸಾಮಾನ್ಯ ಶಿಕ್ಷಕನ ಮಗನನ್ನು ಮೂರು ಬಾರೀ ಅವಳಿ ತಾಲೂಕಿನ ಜನರು ಶಾಸಕರನ್ನಾಗಿ ಮಾಡಿದ್ದಾರೆ ಎಂದರು.ಜೀವನದಲ್ಲಿ ನನಗೆ ಗುರಿಯಿದೆ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡ ಬೇಕೆಂಬುದು ನನ್ನ ಗುರಿಯಾಗಿದೆ. ನಾನು ಸಚಿವನಾಗ ಬೇಕೆಂದು ಸಿಎಂ ಬಳಿ ಕೇಳಿಲ್ಲಾ ಕ್ಷೇತ್ರ ಅಭಿವೃದ್ದಿಗೆ ನನಗೆ ಅನುದಾನ ಕೊಡಿ ಎಂದು ಪ್ರಾಮಾಣಿಕವಾಗಿ ಕೇಳಿದ್ದೇನೆಂದರು.ನಾವು ಬದುಕಿರುವವರೆಗೂ ಒಳ್ಳೆಯದನ್ನು ಮಾಡಬೇಕು, ನಾವು ಸತ್ತಾಗ ನಮ್ಮ ಜೊತೆ ಬರುವುದು ಒಳ್ಳೆಯದು ಮತ್ತು ಕೆಟ್ಟದ್ದು ಮಾತ್ರ ಆಗಾಗೀ ವಿದ್ಯಾರ್ಥಿಗಳು ಒಳ್ಳೆತನ ಬೆಳೆಸಿಕೊಳ್ಳ ಬೇಕೆಂದರುಕೋವಿಡ್ ಬಂದಾಗ ನನ್ನ ಇಡೀ ಜೀವನವನ್ನು ಅವಳಿ ತಾಲೂಕಿನ ಜನರಿಗಾಗೀ ಮುಡುಪಾಗಿಟ್ಟಿದ್ದೇ ಎಂದ ಶಾಸಕರು ನಾನು ಎಂದೂ ಕೂಡ ಅದನ್ನು ಪ್ರಚಾರಕ್ಕಾಗಿ ಮಾಡಿಲ್ಲಾ, ಕೆಲವರು ಅದನ್ನು ಪ್ರಚಾರಕ್ಕಾಗಿ ಮಾಡಿದ್ದಾರೆ ಎಂದರು. ಜನರನ್ನು ರಕ್ಷಣೆ ಮಾಡ ಬೇಕೆಂಬ ಗುರಿನನ್ನದಾಗಿದ್ದು ನನ್ನ ಜೀವನದ ಪಾಪ ಕರ್ಮಗಳನ್ನು ಕೋವಿಡ್ ನಲ್ಲಿ ಕಳೆದಿದ್ದೇನೆ ಎಂದರು.ಈ ಸಂದರ್ಭ ಉಪನ್ಯಾಸಕರಾದ ನಾಗರಾಜ್, ಗ್ರಾ.ಪಂ ಉಪಾಧ್ಯಕ್ಷ ಬಸವರಾಜ್, ಸದಸ್ಯರಾದ ಕವಿತಾ, ಶೃತಿ, ಚಂದನ್, ತಿಮ್ಮಮ್ಮ,ಎಂಪಿಎAಸಿ ಸದಸ್ಯ ಅನುಮಂತಪ್ಪ,ತಾಡಾAಭಿವೃದ್ದಿ ನಿಗಮನದ ನಿದೇರ್ಶಕ ಮಾರುತಿ ನಾಯ್ಕ ಸೇರಿದಂತೆ ಗ್ರಾಮದ ಮುಖಂಡರಿದ್ದರು.