ಸಂಜೆವಾಣಿ ವಾರ್ತೆ
ಸೊರಬ.ಜು.೯; ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಪಟ್ಟಣದ ಹಳೇ ಸೊರಬ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೊಬೈಲ್ ಇವಿಎಂ ಯ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿ ತರಗತಿಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.ಒಟ್ಟು18 ಅಭ್ಯರ್ಥಿಗಳು ಸ್ಪರ್ಧಿಸಿದ್ದರು 3 ಮತಗಟ್ಟೆಗಳನ್ನು ತೆರೆಯಲಾಗಿತ್ತು.10 ನೇ ತರಗತಿ.ಡಿ.ವಿಭಾಗದ ಸೌಭಾಗ್ಯ ಎಂಬ ವಿದ್ಯಾರ್ಥಿನಿ ಶಾಲಾ ಸಂಸತ್ ನಾಯಕಿಯನ್ನಾಗಿ ಆಯ್ಕೆ ಮಾಡಲಾಯಿತು.ಸುಮಂತ.ಮಯಾರ,ತುಷಾರ , ಧೃತಿ ,ಇತರ ತರಗತಿಯ ಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಆಯ್ಕೆಯಾದರು.ಶಾಲಾ ಮುಖ್ಯ ಶಿಕ್ಷಕ ಓಂಕಾರಪ್ಪ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮತಗಟ್ಟೆ 1.2.3.ರ ಅಧಿಕಾರಿಗಳಾಗಿ ಕಲಾವತಿ,ಚಂದ್ರಕಲಾ, ಲಕ್ಷ್ಮಿ,ವಿ.ಗೋಪಾಲ,ಕಲಾಧರೆ, ಸುಜಾತ.ಕೆ.ಸುಜಾತ ಭಂಡಾರಿ.ಶಿಲ್ಪಾ.ಎಲ್.ಎನ್, ಉಮೇಶ್ ರಾಥೋಡ್, ಶೋಭಾ.ಎಸ್.ಬಿ.ರಮೇಶ್, ಪ್ರೇಮಾ, ಶೋಭಾ,ಡಿ.ಸುರೇಖಾ, ಶಿಸ್ತು ಪಾಲನಾ ಅಧಿಕಾರಿಯಾಗಿ ಜಯಶ್ರೀ ಹಾಗೂ ಸತ್ಯನಾರಾಯಣ ಕಾರ್ಯನಿರ್ವಹಿಸಿದರು.ಮುಖ್ಯ ಶಿಕ್ಷಕ ಓಂಕಾರಪ್ಪ ಮಾತನಾಡಿ ನಮ್ಮ ಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ84, ರಷ್ಟು ಫಲಿತಾಂಶ ಪಡೆದುಕೊಂಡು ಕಲಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.ಹಾಗೂ ಶಾಲೆ ಸ್ಥಾಪನೆ ಯಾದ ಇಷ್ಟು ವರ್ಷಗಳ ಇತಿಹಾಸ ದಲ್ಲಿ ಪ್ರಸಕ್ತ ಸಾಲಿನಲ್ಲಿ 464 ವಿದ್ಯಾರ್ಥಿಗಳು ದಾಖಲಾಗಿರುವುದು ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಆದ್ಯಕ್ಷ ಕೃಷ್ಣಪ್ಪ ಓಟೂರು, ಸದಸ್ಯರುಗಳಾದ ಉಮೇಶ್, ಪ್ರಶಾಂತ್,ಕಾಳಪ್ಪ,ಲಕ್ಷ್ಮಣಪ್ಪ, ಗೀತಾ, ಭಾರತಿ, ಪ್ರೇಮಾ,ಸಯ್ಯದ್ ಹಸ್ಮುದೀನ್ ಉಪಸ್ಥಿತರಿದ್ದರು.