
ಸಂಜೆವಾಣಿ ವಾರ್ತೆ
ಹಿರಿಯೂರು.ಜುಲೈ.23-ತಾಲೂಕಿನ ಜೆಜಿಹಳ್ಳಿ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ,ವಿದ್ಯಾರ್ಥಿಗಳಿಗೆ ಚುನಾವಣೆ ಪರಿಕಲ್ಪನೆ ಮೂಡಿಸಲು ಹಾಗೂ ಚುನಾವಣೆಯ ಮಹತ್ವ ಮೂಡಿಸಲು ನಡೆಸಲಾಯಿತು .ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ ನಿರ್ದೇಶಕ ತುಳಸಿ ಕುಮಾರ್ ಮುಖ್ಯ ಶಿಕ್ಷಕ ರಾಕೇಶ್ ಹಾಗೂ ಚುನಾವಣಾ ಉಸ್ತುವಾರಿ ವಹಿಸಿದ್ದ ಸಮೀರ್ ಪ್ರಾಥಮಿಕ ಶಾಲೆ ಯ ಮುಖ್ಯ ಶಿಕ್ಷಕಿ ಗುರುಶಾಂತಮ್ಮ , ಶಾಹಿನ,ರಾಮು ದಾದಾ ನವಾಜ್ , ಶ್ರೀ ರಂಗಮ್ಮ ಉಮೈಮ ಶ್ವೇತಾ ಅಶ್ವಿನಿ ಭಾಗವಹಿಸಿ ಆಡಳಿತ ಮಂಡಳಿ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.