ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಅವಶ್ಯಕ: ನಾರಾಯಣಚಾರ್ಯ

ಶಹಾಪುರ:ಜು.29: ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ
ಸಭೆ ಜರಗಿತು ಪ್ರಾಚಾರ್ಯ ಬಿ. ಶಂಕರರೆಡ್ಡಿ ಸರ್ವರನ್ನು ಸ್ವಾಗತಿಸಿದರು ಕಾಲೇಜು ಅಭಿವೃದ್ಧಿಯ ಸಮಿತಿಯ ಪದಾಧಿಕಾರಿಗಳು ಕಾಲೇಜು ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ಸಮಿತಿಯು ನೀಡಿ ಕಾಲೇಜು ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುವುದು ಅವಶ್ಯಕವಾಗಿದೆ ಹಾಗೂ ಎಲ್ಲರೂ ಸೇರಿಕೊಂಡು ಮಕ್ಕಳ ಹಿತ ದೃಷ್ಟಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಗುಣಾತ್ಮಕ ಶಿಕ್ಷಣ ನೀಡುವದು ವಿದ್ಯಾರ್ಥಿಗಳಿಗೆ ಬೇಕಾಗಿರುವ ಅವಶ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿನ ಅನುದಾನವನ್ನು ಕಲ್ಪಿಸುವಂತೆ ಸಮಿತಿಯ ಅಧ್ಯಕ್ಷರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಮುಖಾಂತರ ಹೆಚ್ಚಿನ ಸೌಕರ್ಯಗಳನ್ನು ನೀಡುವಂತೆಯೂ ವಿನಂತಿ ಮಾಡಿಕೊಳ್ಳೊಣ ಎಂದು ನಾರಾಯಣಚಾರ್ಯ ಸಗರ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ಕಾರ್ಯಧ್ಯಕ್ಷರಾದ ದೇವೇಂದ್ರಪ್ಪ ಆಲ್ದಾಳ ಸಮಿತಿಯ ಸದಸ್ಯರಾದ ಲಾವಣ್ಯ ಚಂದ್ರಶೇಖರ್, ಮರೆಪ್ಪ ಹಾಲಬಾವಿ, ಕಾಲೇಜಿನ ಪ್ರಾಚಾರ್ಯರು ಹಾಗೂ ಸದಸ್ಯ ಕಾರ್ಯದರ್ಶಿ ಬಿ. ಶಂಕರರೆಡ್ಡಿ ಹಿರಿಯ ಉಪನ್ಯಾಸಕರಾದ ವಾಯ್ ಹೆಚ್.ವಜ್ಜಲ್ ಸುರೇಶ ಅರುಣಿ,ಮೋನಯ್ಯ ಗೋನಾಲ್,ಸಾಹಿರಾಭಾನು, ಭೀಮಣ್ಣ ಪೀರಾಪುರ, ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.