ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿದರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ: ಡಿಡಿಪಿಐ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.28:- ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯತರಬೇತಿ ಪೇಪರ್ ಕಟಿಂಗ್, ವ್ಯವಸಾಯ ಮಾಡುವ ವಿಧಾನದ ಬಗ್ಗೆ ಓದಿನ ಜೊತೆಯಲ್ಲಿ ತಿಳಿಸಿದರೆ ಮುಂದೆ ವಿದ್ಯಾರ್ಥಿಗಳ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸು ಅಭಿಪ್ರಾಯ ಪಟ್ಟರು.
ನಗರದ ಸಂತಪೌಲರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತ್ ಹಾಗೂ ಉಪನಿರ್ದೇಶಕರಕಛೇರಿ, ಶಾಲಾ ಶಿಕ್ಷಣ ಇಲಾಖೆ ಚಾಮರಾಜನಗರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕುರಿತು ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆಗಳು ಇರುತ್ತದೆ. ಅಂತಹ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಶಿಕ್ಷಕರು ಮತ್ತು ಪೆÇೀಷಕರು ಮಾಡಬೇಕಿದೆ. ಶಿಕ್ಷಣದ ಜೊತೆಯಲ್ಲಿ ಕೈಯಲ್ಲಿ ತಾಯರಿಸುವ ವಸ್ತುಗಳನ್ನು ಮಾಡುವುದು ಶಾಲೆಗಳಲ್ಲಿ ಕೈ ತೋಟ ಮಾಡುವುದು, ಇದರಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರೈತರಿಗೆ ಸಹಾಯವಾಗುವ ವಿಷಯಗಳನ್ನು ತಿಳಿಸುವ ನಿಟ್ಟಿನಲ್ಲಿ ನಿಮ್ಮ ಚಟುವಟಿಕೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆ ಪರಿಸರಕ್ಕೆ ಹೆಸರುವಾಸಿಯಗಿದೆ. ಪರಿಸರದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕರಕುಶಲತೆಯನ್ನು ಕಲಿಯಬಹುದು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪ್ರಾಢಶಾಲೆಗಳಿಂದ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದಿರಿ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು, ವಿಜೇತರಾದ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಇನ್ನು ಹೆಚ್ಚಿನ ಶ್ರಮವಹಿಸಿ ಶಾಲೆಗೆ ಹಾಗೂ ಜಿಲ್ಲೆಗೆ ಕಿರ್ತಿತರಬೇಕು ಎಂದು ಹೇಳಿದರು.
ವೃತ್ತಿ ಶಿಕ್ಷಣ ಕುರಿತು ವಸ್ತು ಪ್ರದರ್ಶನದಲ್ಲಿಟೈಲರಿಂಗ್ ವಿಭಾಗದಲ್ಲಿ ಪ್ರಥಮ ಬಹುಮಾನ ಕೊಳ್ಳೇಗಾಲದ ಎಸ್.ವಿ.ಕೆ ಬಾಲಕ ಪದವಿ ಪೂರ್ವ ಕಾಲೇಜಿಗೆ ದೊರೆತರೆ, ತೋಟಗಾರಿಕೆ ವಿಭಾಗದಲ್ಲಿ ಪ್ರಥಮ ಬಹುಮಾನ ಸರ್ಕಾರಿ ಎಂ. ಸಂಗಶೆಟ್ಟಿ ಪದವಿಪೂರ್ವ ಕಾಲೇಜು ಕುದೇರು, ದ್ವಿತೀಯ ಬಹುಮಾನ ಹೊನ್ನೂರಿನ ಭೀಮ್‍ರಾವ್ ರಾಮ್‍ಜೀ ಪ್ರೌಢಶಾಲೆ, ತೃತೀಯ ಬಹುಮಾನ ಬಿಳಿಗಿರಿರಂಗನಬೆಟ್ಟದ ವಿವೇಕನಂದಗಿರಿಜನ ಪ್ರೌಢ ಶಾಲೆಗೆ ದೊತೆತಿದೆ.
ವಸ್ತು ಪ್ರದರ್ಶನದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಳೂಕಿನ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ವಿಷಯ ಪರಿವಿಕ್ಷಕ ಶಂಕರ್.ಪಿ, ಪುಷ್ಪರಾಜ್.ಸಿ, ಗಿರೀಶ್.ಬಿ.ಪಿ, ನೋಡಲ್ ಅಧಿಕಾರಿ ಕೃಷ್ಣಪ್ರಸಾದ್, ಹಾಗೂ ಸಂಘದ ಅಧ್ಯಕ್ಷ ಶಿವಯ್ಯ, ಗೋಪಾಲಸ್ವಾಮಿ ಹಾಜರಿದ್ದರು.