ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಾಗಾರ

ಪುತ್ತೂರು,ಏ.೨- ನರೇಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಮಾಹಿತಿ ಘಟಕದ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಜರಗಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ. ರೇಖಾ ಕೆ, ಅವರು ಕಾನೂನಿನ ಕಲಿಯುವಿಕೆ ಎಂಬುದು ಒಂದು ಸಾಗರ. ಕಾನೂನು ಮಾಹಿತಿ ಕಲಿಯುತ್ತಾ ಹೋದಂತೆ ಕಾನೂನಿನ ಕುರಿತಾದ ಜ್ಞಾನ ಹೆಚ್ಚಾಗುತ್ತದೆ. ಜತೆಗೆ ತನ್ನನ್ನು ತಾನು ಸಮಾಜಮುಖಿಯಾಗಿಸುವಲ್ಲಿ ನೆರವು ನೀಡುತ್ತದೆ. ಸಾಮಾಜಿಕವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ಕುಮಾರ್ ಎಸ್ ಅವರು ಕಾನೂನು ಜ್ಞಾನ ಪಡೆದುಕೊಳ್ಳಲು ಇರುವ ಹಲವಾರು ಅವಕಾಶಗಳ ಕುರಿತಾಗಿ ಮಾಹಿತಿ ನೀಡಿದರು. ಪದವಿಪೂರ್ವ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ’ನ್ಯಾಯಧಾರಾ’ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ಕಾನೂನಿನ ವಿವಿಧ ಸ್ತರಗಳಲ್ಲಿ ಒಂದಾದ ನ್ಯಾಯಾಂಗ ವ್ಯವಸ್ಥೆ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣದ ನಂತರ ಕಾನೂನು ಶಿಕ್ಷಣಕ್ಕೂ ಆದ್ಯತೆ ನೀಡುವುದು ಅತೀ ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ್ ಡಾ. ಪ್ರಸಾದ್ ಶಾನ್‌ಭೋಗ್ ಉಪಸ್ಥಿತರಿದ್ದರು.