ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ

ಕರಜಗಿ:ನ.24:ಇಂದಿನ ದಿನಗಳಲ್ಲಿ ಎಲ್ಲರಿಗೂ,ಕಾನೂನಿನ ಅರಿವು ಅಗತ್ಯವಾಗಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಕಾನೂನು ಅರಿವು ಹೊಂದಿದ್ದಲ್ಲಿ ಕಾನೂನಾತ್ಮಕವಾಗಿ ಉಂಟಾಗುವ ಅನೇಕ ಸಮಸ್ಯೆಗಳಿಗೆ, ಪರಿಹಾರ ನೀಡಬಹುದು ಎಂದು ನ್ಯಾಯವಾದಿ ಕೆ ಜಿ ಪೂಜಾರಿ ಹೇಳಿದರು
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ನ್ಯಾಯವಾದಿಗಳ ಸಂಘ ಅಫಜಲಪುರ ತಾಲೂಕು ಪಂಚಾಯತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಮಿಕ ಇಲಾಖೆ ಹಾಗೂ ಪೆÇೀಲೀಸ್ ಇಲಾಖೆ ಅಫಜಲಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿತ್ಯದ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಕಾನೂನಿನ ಜ್ಞಾನ ಅವಶ್ಯಕವಾಗಿದೆ. ಕಾನೂನಿನ ಅರಿವಿನ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧಗಳು ನಡೆಯುತ್ತಿವೆ. ಹಿಂದುಳಿದವರು,
ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ಸೇವೆಯ ನೆರವು ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಕಾನೂನು ಪಾಲಿಸುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳಬೇಕು.ಎಲ್ಲರೂ ಸಮನಾಗಿ ಆತ್ಮಗೌರವದಿಂದ ಬದುಕು ನಡೆಸಲು ಸಂವಿದಾನ ಎಲ್ಲರಿಗೂ ಅವಕಾಶ ನೀಡಿದೆ. ಸಮಾಜದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕಾನೂನಿನ ಅರಿವಿರಬೇಕೆಂಬ ಮಹತ್ವದ ಆಶಯ ಹೊಂದಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ನಡೆಸಲಾಗುತ್ತಿದೆ.ಎಂದು ಹೇಳಿದರು
ರಾಣಿ ಬುಕ್ಕೆಗಾರ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು.ತಂದೆ-ತಾಯಿ ಕಂಡ ಕನಸುಗಳನ್ನು ನನಸು ಮಾಡಿ,ನಿಮ್ಮ ಭವಿಷ್ಯ ಉಜ್ವಲ ರೂಪಿಸಿಕೊಳ್ಳಲು ಶ್ರಮ
ಪಡಬೇಕು ಸಮಯ ವ್ಯರ್ಥ ಮಾಡದೆ ಓದಿನ ಕಡೆ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡಬೇಕು. ಶಾಲಾ
ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ.ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಜವಾಬ್ದಾರಿಗಳು
,ಕಾನೂನಿನ ಅರಿವು ಹೊಂದಬೇಕು.ಕಾನೂನಿನ
ಅರಿವಿದ್ದರೆ ಯಾರ ನೆರವು ಬೇಕಾಗಿಲ್ಲ.
ಆತ್ಮಸ್ಥೆ?ರ್ಯ ಪಡೆದು ಸಮಾಜದಲ್ಲಿ ಮುನ್ನುಗ್ಗಲು ಕಾನೂನಿನ ಅಸ್ತ್ರಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ನ್ಯಾಯವಾದಿ ಎಂ ಎಸ್ ಪಾಟೀಲ ಸೌಮ್ಯ ಪಟ್ನೆ ದಾದಾಗೌಡ ಪಾಟೀಲ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಮೇಘಾ ಕಲಶೆಟ್ಟಿ ಕಾರ್ಯದರ್ಶಿ ನಾರಾಯಣ ಚವ್ಹಾಣ ಗ್ರಾಮ ಲೆಕ್ಕಾಧಿಕಾರಿ ದವಲಪ್ಪ ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಮುಖಂಡರಾದ ಅಪ್ಪಾಸಾಬ ಹೊಸೂರಕರ ಚಂದ್ರಕಾಂತ ದೈತನ ಮಲಕಣ್ಣ ಹೊಸೂರಕರ ಶಿಕ್ಷಕರಾದ ಚನ್ನನಗೌಡ ಮಾಲಿಪಾಟೀಲ ಶ್ರೀಶೈಲ ಸನದಿ ಮರೆಪ್ಪ ಸಿಂದೆ ಶ್ರೀಶೈಲ ಭಾವಿಕಟ್ಟಿ ದತ್ತಪ್ಪ ಡೊಂಬಾಳೆ ಸಲೀಮ ಜಮಾದಾರ ಚಕ್ರವರ್ತಿ ಬಸ್ಸಿನಕರ ಭಾಗೀರಥಿ ಬಿರಾದಾರ ಶೈಲಾ ಎಚ್ ಎಸ್ ಸುಮಲತಾ ಕುಂಬಾರ ಸಂಗೀತಾ ಟಕ್ಕಳಕಿ ಕಲಾವತಿ ಕೊಳಲಗಿ ಶೈಲಾ ಸೂಳಿಭಾವಿ ಸೇರಿದಂತೆ ವಿದ್ಯಾರ್ಥಿಗಳಿದ್ದರು