ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

ವಾಡಿ:ಡಿ.30: ದೃಷ್ಟಿ ದೋಷ ಹೊಂದಿರುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದ್ದು, ಹಂತ ಹಂತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಹೆಮಾನಸಾಬ್ ಬಾಂಬೆ ಹೇಳಿದ್ದಾರೆ.
ಪಟ್ಟಣ ಸಮೀಪದ ಕಮರವಾಡಿ ಗ್ರಾಮದಲ್ಲಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಕ್ಕಳಿಗೆ ನೀಡಿರುವ ಕನ್ನಡಕ್Àಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ, ದೃಷ್ಟಿ ದೋಷ ಹೊಂದಿರುವ ವಿದ್ಯಾರ್ಥಿಗಳಿಗೆ ಬಾಂಬೆ ಕನ್ನಡಕ್ ವಿತರಿಸಿ ಮಾತನಾಡಿದರು. ಸರಕಾರಿ ಶಾಲೆಯ 26 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ ಮಾಡಿಸುವ ಯೋಜನೆ ರೂಪಿಸಿಕೊಂಡಿದ್ದರು. ಅದರಂತೆ ತಪಾಸಣೆ ನಡೆಸಿದಾಗ 2 ಸಾವಿರದ ನಾಲ್ಕು ನೂರಕು ಅಧಿಕ ಮಕ್ಕಳಿಗೆ ದೃಷ್ಟಿ ಸಮಸ್ಯೆ ಗುರುತಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಿಸಲು ಕ್ರಮಕೈಗೊಂಡಿದ್ದರು. ಅದರ ಅಂಗವಾಗಿ ಕಮರವಾಡಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿತರಿಸಲಾಗಿದೆ.
ಅಭಿವೃದ್ದಿ ಅಧಿಕಾರಿ ಶೇಖಪ್ಪ ಶಂಕು, ಸಹ ಶಿಕ್ಷಕರಾದ ಸುರೇಶಕುಮಾರ, ಮಂಜೂಳಾ ಕುಲಕರ್ಣಿ, ರೀಜಿವಾನಾ ಬೇಗಂ, ಮುಖಂಡ ಭೀಮಾಶಂಕರ ಇಂದೂರ, ಸಿದ್ದುಗೌಡ ಭಾಗೋಡಿ, ಲಕ್ಷ್ಮಣ ಅಮಕಾರ, ಇದ್ದರು.