ವಿದ್ಯಾರ್ಥಿಗಳಿಗೆ ಒತ್ತಡ ಸೃಷ್ಟಿಸಬಾರದು


ಸಂಜೆವಾಣಿ ವಾರ್ತೆ
ಸಂಡೂರು:ಜು: 26: ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎಂದು ಕರೆಯುತ್ತಿದ್ದೇವು, ಅದರೆ ಇಂದು ಒಂದು ರೀತಿಯಲ್ಲಿ ಒತ್ತಡದ ಜೀವನ ವಾಗುತ್ತಿದೆ, ಕಾರಣ ತೀವ್ರವಾದ ಪೈಪೋಟಿಯ ಕಾಲದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಅಂಕಗಳ ಬೆನ್ನಟ್ಟಿ ಹೋಗುತ್ತಿದ್ದಾನೆ, ಅದ್ದರಿಂದ ಪಾಲಕರು ಮತ್ತು ಶಿಕ್ಷಕರು ಇಂತಹ ಒತ್ತಡ ಹೇರುವುದು ಸರಿಯಾದ ಪದ್ದತಿಯಾಗಲಾರದು, ಅದ್ದರಿಂದ ಅತನಿಗೆ ಮುಕ್ತ ಅವಕಾಶ ನೀಡಿದಷ್ಟು ಸಾಧನೆ ಹೆಚ್ಚು ಮಾಡುತ್ತಾನೆ ಎಂದು ವಿಜಯಪುರದ ಕೋಟಿ ಹಾಸ್ಪಿಟಲ್ ಸಂಸ್ಥಾಪಕರಾದ ಡಾ. ಪರೀಕ್ಷಿತ್ ಕೋಟಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಎಸ್ ವಿ ನಾನಾವಟೆ ಪಿಯುಸಿ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧೆ ಬೇಕು ಅದು ಆರೋಗ್ಯಕರವಾದ ಸ್ಪರ್ಧೆಯಾಗಿರಲಿ, ಅಂತಹ ಶಿಕ್ಷಣವನ್ನು ಸಂಸ್ಥೆ, ಶಿಕ್ಷಕರು ನೀಡುವ ಮೂಲಕ ಸಮಾಜ ಕಟ್ಟುವ ಕಾರ್ಯಕ್ಕೆ ಇಂದಿನ ವಿದ್ಯಾರ್ಥಿಗಳು ಸಾಗಬೇಕು, ಕುಟುಂಬ, ತಂದೆ, ತಾಯಿ, ದೇಶ, ಗುರುಹಿರಿಯರಿಗೆ ಗೌರವಿಸುವಂತಹ ಕಾರ್ಯ ಮಾಡಿ, ಈ ಗ್ಲೋಲ್ಡನ್ ಬದುಕನ್ನು ಅನಂದಿಸಿ ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಅಗಮಿಸಿದ ಪೋಲೀಸ್ ಸಬ್ ಇನ್ಸಪೆಕ್ಟರ್, ಲೋಕಾಯುಕ್ತ, ಬಳ್ಳಾರಿ ಇವರು ಮಾತನಾಡಿದ ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಅದರಿಂದ ಹೊರಬಂದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ಸಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ನೀಟ್ 868 ರ್ಯಾಂಕ್ ಪಡೆದ ರೋಹಿತ್ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ, ಹಾಗೂ ಮುಖ್ಯ ಮಾರ್ಗದರ್ಶಿ ಚಿದಂಬರ ನಾನಾವಟೆ, ಪ್ರಾಂಶುಪಾಲ, ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ, ಉಪ ಪ್ರಾಂಶುಪಾಲ ಜಯಪ್ರಕಾಶ್ ಎಸ್. ಎನ್, ಅಕಾಡೆಮಿಕ್ ಡೀನ್ ನಾಗೇಂದ್ರ ಪ್ರಸಾದ್, ವಾಣಿಜ್ಯ ವಿಭಾಗದ ಸಂಯೋಜಕ ಆನಂದ ಸಾಳುಂಕೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.