ವಿದ್ಯಾರ್ಥಿಗಳಿಗೆ ಒಂದು ಕೋಟಿ 30 ಲಕ್ಷ ರೂ ಸಾಲ: ರಾಮಸ್ವಾಮಿ

ಇಂಡಿ:ಜೂ.21:ಸರಕಾರಿ ಕೋಟಾದಡಿ ವೈದ್ಯಕೀಯ,ದಂತ ವೈದ್ಯಕೀಯ,ಆಯುರ್ವೇದ, ಇಂಜಿನಿಯರಿಂಗ್,ಕೃಷಿ,ತೋಟಗಾರಿಗೆ, ಸ್ನಾತಕೋತ್ತರ ಸೇರಿದಂತೆ ವಿವಿಧ ಕೋರ್ಸುಗಳಿಗೆ ಆಯ್ಕೆಯಾದ ಇಂಡಿ ತಾಲೂಕಿನ 42 ವಿದ್ಯಾರ್ಥಿಗಳಿಗೆ ಒಂದು ಕೋಟಿ 30 ಲಕ್ಷ ರೂ ಸಾಲ ನೀಡಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿ ಶಾಖೆಯ ಮುಖ್ಯ ವ್ಯವಸ್ಥಾಪಕ ಬಿ.ಜೆ.ರಾಮಸ್ವಾಮಿ ಹೇಳಿದರು.
ಪಟ್ಟಣದ ಜಿ.ಆರ್ ಗಾಂಧಿ ಕಲಾ,ವೈ.ಎ.ಪಿ ವಾಣಿಜ್ಯ ಮತ್ತು ಎಂ.ಎಫ್.ದೋಶಿ ವಿಜ್ಞಾನ ಮಹಾವಿದ್ಯಾಲಯದಿಂದ ಕೇಸರಾಳ ತಾಂಡಾದಲ್ಲಿ ನಡೆಸ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅವರ ಕಾಲೇಜಿನ ಫೀ, ಹಾಸ್ಟೇಲ್,ಊಟ ಸೇರಿದಂತೆ ಅವಶ್ಯಕ ಫೀ ನೀಡಲಾಗುವದು. ವಿದ್ಯಾರ್ಥಿಗಳು ಕೋರ್ಸು ಮುಗಿದ ನಂತರ ಒಂದು ವರ್ಷದ ನಂತರ ಇಲ್ಲವೆ ಸೇವೆಯಲ್ಲಿದ್ದರೆ ಕಂತುಗಳ ರೂಪದಲ್ಲಿ ಮರುಪಾವತಿಸಬೇಕಾಗುತ್ತದೆ ಎಂದರು.
ಎನ್ನೆಸ್ಸೆಸ್ ಅಧಿಕಾರಿ ವಿಶ್ವಾಸ ಕೋರವಾರ, ಡಾ. ಜಯಪ್ರಸಾದ. ಡಾ. ಮಲ್ಲಿಕಾರ್ಜುನ ಕೊಣದೆ, ಪ್ರಾಚಾರ್ಯ ಎಸ್.ಬಿ.ಜಾಧವ, ಸುಧಾರಾಣಿ ಕುಳಗೇರಿ, ಜಾವೇದ ತಾಂಬೋಳಿ ಮಾತನಾಡಿದರು.ಸಭೆಯಲ್ಲಿ ತಾಂಡಾದ ಗಣ್ಯರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.