ವಿದ್ಯಾರ್ಥಿಗಳಿಗೆ ಉಚಿತ ಸಸಿ ವಿತರಣೆ

ಬೀದರ್: ಜೂ.7:ಇಲ್ಲಿಯ ಬೊಮ್ಮಗೊಂಡೇಶ್ವರ ವೃತ್ತ ಸಮೀಪದ ನಂದಿ ಪೆಟ್ರೋಲ್ ಬಂಕ್ ಹತ್ತಿರದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಚಿತ ಸಸಿ ವಿತರಿಸಲಾಯಿತು.
ಪರಿಸರ ಮಾಲಿನ್ಯ ಸಕಲ ಜೀವರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಕಾರಣ, ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ತಲಾ ಎರಡು ಸಸಿ ನೆಡಬೇಕು ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ಪುಂಡಲೀಕರಾವ್ ಪಾಟೀಲ ಗುಮ್ಮಾ ಹೇಳಿದರು.
ಬರ, ಜಲ ಕ್ಷಾಮ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಪರಿಸರ ಮಾಲಿನ್ಯವೇ ಕಾರಣ ಎಂದು ಸಪ್ತಸ್ವರ ಸಂಗೀತ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ತಿಳಿಸಿದರು.
ಪ್ರಮುಖರಾದ ಸಂಜುಕುಮಾರ ಸ್ವಾಮಿ ಉಜನಿ, ಪ್ರಕಾಶ ಪಾಟೀಲ, ಮಹೇಶ ಜನವಾಡ ಇದ್ದರು.