ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆ

ದಾವಣಗೆರೆ.ಜು.24; ಮೌಲಾನಾ ಆಜಾದ್ ಸೋಷಿಯಲ್‌ ವೆಲ್ ಪೇರ್ ಅಸೋಸಿಯೇಷನ್ ವತಿಯಿಂದ  ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್, ಪೆನ್ನು ವಿತರಣಾ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ ಯಶವಂತ್ ರಾವ್ ಜಾಧವ್* ಅವರ ಹೋರಾಟದ ಕಿಚ್ಚು ಯಾರಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ.ಅವರು ಯಾವತ್ತೂ ಸ್ವಹಿತಕ್ಕಾಗಿ ರಾಜಿ ಮಾಡಿಕೊಂಡದ್ದನ್ನು ಎಲ್ಲೂ ಕೂಡ ಕಂಡಿಲ್ಲ ಪಕ್ಷದಲ್ಲಿ ನನಗೆ ಇಂತಹದ್ದೇ ಜವಾಬ್ದಾರಿ ಬೇಕೆಂದು ಬೇಡಿಕೆಯಿಟ್ಟವರು ಅಲ್ಲ ತಮ್ಮ ಹೋರಾಟ ಏನಿದ್ದರೂ ಸಮಾಜಕ್ಕೆ ಪಕ್ಷಕ್ಕೆ ಸೀಮಿತವಾಗಿ ಮೀಸಲಿಟ್ಟಿದ್ದಾರೆ‌ ಎಂದರು.ಈ ಸಂದರ್ಭದಲ್ಲಿ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿಗಳು,ಮೌಲಾನಾ ಆಜಾದ್ ಅಸೋಸಿಯೇಷನ್ ಮುಖ್ಯಸ್ಥ ನಸೀರ್ ಅಹಮದ್, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.