ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಪೆನ್ ವಿತರಣೆ

ಆಳಂದ:ನ.4:ಕನ್ನಡ ನಾಡು, ನುಡಿ, ಭಾಷೆ ಉಳಿಸಿ-ಬೆಳೆಸಲು ಪ್ರತಿಯೊಬ್ಬರು ಕನ್ನಡ ಕಾವಲುಗಾರರಾಗಿ ನಿಲ್ಲಬೇಕಾಗಿದೆ ಎಂದು ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಯಳಸಂಗಿ ಹೇಳಿದರು. ತಾಲ್ಲುಕಿನ ನಿಂಬರ್ಗಾ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಜಗತ್ತಿನ 5 ಸಾವಿರ ಭಾಷೆಗಳಲ್ಲಿ ಕೇವಲ 11 ಭಾಷೆಗಳಿಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರ ಪೈಕಿ ಕನ್ನಡ ಭಾಷೆಯೂ ಒಂದಾಗಿದೆ. ಇಂಥಹ ಇತಿಹಾಸ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಭಂಜಾರ ಕ್ರಾಂತಿ ಧಳದ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆ ದೊಡ್ಡ ಪರಂಪರೆ ಹೊಂದಿದ್ದೆ, ಇಂದು ನಿಂಬರ್ಗಾ ಗ್ರಾಮದಲ್ಲಿ ಕ.ರ.ವೇ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ಕೈಗೊಳ್ಳುತ್ತಿರೋದು ಹೆಮ್ಮೆಯ ವಿಷಯ ಎಂದರು.

ಗ್ರಾಂ.ಪಂ. ಅಧ್ಯಕ್ಷ ಸಾತಣ್ಣ ಮಂಟಗಿ ಮಾತನಾಡಿ, ಕನ್ನಡ ನಾಡು ಶ್ರೀಗಂಧದ ನಾಡು, ಅನೇಕ ಸಾಧು ಸಂತರ, ದಾಸರ, ಶಿವಶರಣರ, ಕವಿಗಳಿಂದ ಕಂಗೋಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಧಿಮಂತ ಶಕಿಯಾಗಿದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯು ರೈತರ ಪರ, ಕೂಲಿ ಕಾರ್ಮಿಕರ ಪರ, ವಿಧ್ಯಾರ್ಥಿಗಳ ಪರ, ಅಲ್ಲದೆ, ಅನೇಕ ರೀತಿಯ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರೋದು ಶ್ಲಾಘನೀಯವಾಗಿದೆ. ರಾಜ್ಯೋತ್ಸವದ ನಿಮಿತ್ಯವಾಗಿ ಹತ್ತನೆ ತರಗತಿಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು. ಕನ್ನಡಾಂಬೆಯ ಭಾವಚಿತ್ರಕ್ಕೆ ಉಪ-ತಹಶೀಲ್ದಾರ ಆರ್.ಮಹೇಶ ಪೂಜೆ ನೇರವೇರಿಸಿದರು.

ಗ್ರಾ.ಪಂ. ಅಧ್ಯಕ್ಷ ಸಾತಣ್ಣ ಮಂಟಗಿ ಧ್ವಜಾರೋಹಣ ನೇರವೇರಿಸಿದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಉಷಾರಾಣಿ, ಕಂಧಾಯ ನಿರೀಕ್ಷಕ ಅನೀಲಕುಮಾರ, ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ನಿಂಗರಾಜ ಸಂಗೊಂಡ, ಅರಿವು ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮಾಳಗೆ, ಲಾಲು ಚಪರಾಸಿ, ಚಂದ್ರಕಾಂತ ಮೀಟೆಕಾರ, ಸೋಮಣ್ಣ ನಾಗುರ, ಮಲ್ಲಿನಾಥ ನಾಗಶೆಟ್ಟಿ, ಚಂದ್ರಕಾಂತ ಮಠಪತಿ, ರಾಮಚಂದ್ರ ದುಗೊಂಡ, ಈರಣ್ಣ ನಂದಿ, ಪ್ರಕಾಶ ಸಮಗಾರ, ಶ್ರೀಶೈಲ್ ನಿಗಶೆಟ್ಟಿ, ಈರಣ್ಣ ಶರಣ ಮಲ್ಲಿನಾಥ ನಾಟೀಕಾರ, ಸಾಗರ ದುರ್ಗದ, ಕ್ಷೇಮಲಿಂಗ ಕಂಭಾರ, ಭಾಗಣ್ಣ ದುಗೊಂಡ, ಸಿದ್ದಾರಾಮ ಬಣಗಾರ, ಶರಣಬಸಪ್ಪ ಬೀರಾದಾರ, ಮಹಾದೇವ ಮೀಟೆಕಾರ, ಮಡಿವಾಳಪ್ಪ ಮಡಿವಾಳ, ಅನೀಲ ಮಠಪತಿ, ಧರ್ಮರಾಯ ವಗ್ಧರ್ಗಿ, ನಾಗರಾಜ ಅಂತಪ್ಪನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.