ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥ ವಿತರಣೆ

ಸಿರವಾರ.ಜೂ.೮- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬಿಸಿಯೂಟ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿದ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದೂ, ವಿದ್ಯಾರ್ಥಿಗಳ ಜೊತೆ ಪಾಲಕರು ಸಹ ಆಗಮಿಸಿ ತೆಗೆದುಕೊಳುತ್ತಿದ್ದಾರೆ ಎಂದು ಬಾಲಕರ ಪ್ರೌಢ ಶಾಲೆಯ ಪ್ರಾಚಾರ್ಯ ಡಿ.ಸುರೇಶ ಹೇಳಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕಾಗಿ ನವೆಂಬರ್- ಡಿಸೆಂಬರ್ ತಿಂಗಳ ಅಕ್ಕಿ, ಬೇಳೆ, ಗೋದಿ ಹಾಗೂ ಎಣ್ಣೆ ಬಿಡುಗಡೆಯಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಸೋಮವಾರದಿಂದ ವಿತರಣೆ ಮಾಡಲಾಗುತ್ತಿದ್ದೂ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ತೊಂದರೆಯಾಗುತ್ತಿದೆ ಎಂದು ಹಿಂದೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದಾಗ ಬಿಸಿಯೀಟ ಯೋಜನೆಯನ್ನು ಜಾರಿಗೆ ತರಲಾಗಿತು.
ಕೊವೀಡ್ ೧೯ ವೈರಸ್ ನಿಂದಾಗಿ ಶಾಲೆಗಳು ಬಂದ್ ಆಗಿದರೂ, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಆಹಾರ ಪಾದರ್ಥಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರದೊಂದಿಗೆ ವಿತರಣೆ ಮಾಡುವ ಜೊತೆಗೆ ವಿದ್ಯಾರ್ಥಿಗಳು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆಯೆ, ಒಂದು ವೇಳೆ ಮಾಡುತ್ತಿಲ್ಲವೆಂದರೆ ತಿಳಿ ಹೇಳುವ ಕೆಲಸ ಮಾಡಿದ್ದೆವೆ ಎಂದರು. ಶಿಕ್ಷಕ ಕೇಶಪ್ಪ, ಪತ್ರಕರ್ತ ಹನುಮೇಶ ಛಲವಾದಿ ಸೇರಿದಂತೆ ಇನ್ನಿತರರು ಇದ್ದರು.