ವಿದ್ಯಾರ್ಥಿಗಳಿಗೆ ಅಭಿನಂದನೆ

ಕೋಲಾರ,ಆ.೧೯:ಕೋಲಾರ ತಾಲೂಕು ಸವಿತಾ ಸಮಾಜ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುವರ್ಣ ಕನ್ನಡ ಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಿಗೆ ಹಾಗೂ ಹಿರಿಯ ಕ್ಷೌರಿಕರಿಗೆ ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಾಜಿ ಜಿಲ್ಲಾ ಅಧ್ಯಕ್ಷ ಎಸ್ ಮಂಜುನಾಥ್, ಕೆಪಿಸಿಸಿ ಬೇತಮಂಗಲ ಸದಸ್ಯ ದುರ್ಗಾ ಪ್ರಸಾದ್, ಕಲಾ ಸಂಘ ರಾಜ್ಯಾಧ್ಯಕ್ಷ ಚಂದ್ರಶೇಖರ್, ಸವಿತಾ ಸಮಾಜ ತಾಲೂಕು ಅಧ್ಯಕ್ಷ ಪ್ರದೀಪ್, ಸವಿತಾ ಸಮಾಜ ತಾಲೂಕು ಸಹಕಾರ ಸಂಘದ ಅಧ್ಯಕ್ಷ ಡಿ.ಸರ್ವೋದಯ, ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸುಬ್ರಮಣಿ, ಎಸ್.ವಿ.ಮರಿಸ್ವಾಮಿ, ವೇಮಗಲ್ ಮುನಿಯಪ್ಪ, ಯುವ ಮುಖಂಡ ಜಂಬಾಪುರ ವಿನಯ್, ಸವಿತಾ ಕಲಾ ಸಂಘದ ಅಧ್ಯಕ್ಷ ಮಾದೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಚಲಪತಿ ಎ, ಕಲಾ ಸಂಘದ ಗೌರವಾಧ್ಯಕ್ಷ ಯಲವಾರ ನಾರಾಯಣಸ್ವಾಮಿ, ಕಾಮಂಡಳ್ಳಿ ನಾಗರಾಜು, ಮಂಜುನಾಥ್, ರಾಜು ಬ್ರದರ್ಸ್, ಶಿವಶಂಕರ, ವೇಮಗಲ್ ಸುರೇಶ್ ಸೀತಿ, ಸುಗುಟೂರು ಚಂದ್ರಪ್ಪ ಇನ್ನಿತರರು ಉಪಸ್ಥಿತರಿದ್ದರು.