ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಬಂಗಾರಪೇಟೆ,ಮೇ.೩- ನಗರದ ಸ್ಯಾನಿಟೋರಿಯಂ ಬಳಿ ಇರುವ ಎಸ್.ಡಿ.ಸಿ ವಿದ್ಯಾಸಂಸ್ಥೆ ವತಿಯಿಂದ ನ್ಯಾಷನಲ್ ಪಬ್ಲಿಕ್ ಶಾಲಾ ಆವರಣದಲ್ಲಿ ಎಸ್.ಡಿ.ಸಿ ಸಮೂಹ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜುಗಳಲ್ಲಿ ೨೦೨೨-೨೩ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ೩೬೬ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ವಿದ್ಯಾರ್ಥಿಗಳ ಪೋಷಕರ ಸಮ್ಮುಖದಲ್ಲಿ ಅವರಿಗೆ ವಿನೂತನ ರೀತಿಯಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಗಂಗಾಧರ ಅವರು ವಹಿಸಿ, ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿ ಉಷಾಗಂಗಾಧರ ಅವರು ಉದ್ಘಾಟಿಸಿದರು. ನಂತರ ಸಂಸ್ಥೆಯು ಬೆಳೆದುಬಂದ ಹಾದಿಯನ್ನು ಮತ್ತು ಸಮೂಹ ವಿದ್ಯಾಸಂಸ್ಥೆಯಲ್ಲಿ ಪ್ರಸ್ತುತ ೬೦೦೦ ವಿದ್ಯಾರ್ಥಿಗಳಿದ್ದು ೩೦೦ ಬೋಧಕ ಮತ್ತು ಭೋದಕೇತರ ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿ, ತಮ್ಮ ಸಂಸ್ಥೆಯಲ್ಲಿ ಪ್ರಿ.ಕೆ.ಜಿ.ಯಿಂದ ಪಿ.ಜಿ.ವರೆಗೆ ಶಿಕ್ಷಣ ನೀಡಲಾಗುತ್ತಿರುವುದಾಗಿ ಹೇಳಿದರು. ವಿದ್ಯಾಕ್ಷೇತ್ರದಲ್ಲಿ ಹಿಂದುಳಿದಿರುವ ನಮ್ಮ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡುವ ಹಾಗೂ ಈಗಿನ ಜಾಗತಿಕ ಪ್ರಪಂಚದಲ್ಲಿನ ಸ್ಫರ್ಧೆಯಲ್ಲಿ ಮುಂಚೂಣಿಯಲ್ಲಿ ನಮ್ಮ ವಿದ್ಯಾರ್ಥಿಗಳು ಮುಂದೆ ಬರಲು ಸಂಸ್ಥೆಯ ಸಂಸ್ಥೆಯ ಎಲ್ಲಾ ಶಿಕ್ಷಕರು ದುಡಿಯುತ್ತಿರುವುದಾಗಿ ತಿಳಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ವಿ.ಆರ್ ಸುದರ್ಶನ್ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಉತ್ತಮವಾದ ವಿದ್ಯೆಯನ್ನು ಹಾಗೂ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವ ಎಸ್.ಡಿ.ಸಿ ವಿದ್ಯಾಸಂಸ್ಥಗೆ ಅಭಿನಂದಿಸಿ ಹಾಗೂ ಈ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಪ್ರಾರಂಭಿಸಲಾಗುತ್ತಿರುವ ನ್ಯಾಷನಲ್ ಪಬ್ಲಿಕ್ ಶಾಲೆಯು ಉತ್ತಮವಾಗಿ ಹೆಮ್ಮರದಂತೆ ಬೆಳೆದು ಸ್ಫರ್ಧಾಯುಗವಾಗಿದ್ದು ಈ ಯುಗದಲ್ಲಿ ಯಾರು ಶ್ರಮವಹಿಸಿ ಶಿಸ್ತಿನಿಂದ ಹಾಗೂ ಆಸಕ್ತಿಯಿಂದ ತಮ್ಮ ಗುರಿಯನ್ನು ಮುಟ್ಟಲು ಸಾಧನೆಯನ್ನು ಪ್ರಯತ್ನವನ್ನು ಮಾಡುವರೋ ಅವರು ಜೀವನದಲ್ಲಿ ಉನ್ನತಸ್ಥಾನಕ್ಕೆ ಬರುವರು ಹಾಗಾಗಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಇಲ್ಲಿಗೆ ನಿಲ್ಲಿಸದೆ ತಮ್ಮ ಮುಂದಿನ ಗುರಿಯನ್ನು ಮುಟ್ಟುವವರೆಗೂ ಮುಂದುವರಿಸಬೇಕು ಎಂದು ಶುಭವನ್ನು ಹಾರೈಸಿದರು.