ವಿದ್ಯಾರ್ಥಿಗಳಿಗಾಗಿ ನಾಳೆಯಿಂದ ಸಾಂಸ್ಕೃತಿಕ ವೈಭವ-ಯುವಜನೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.04ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇದೇ 5 ಮತ್ತು 6 ರಂದು ಎರಡು ದಿನಗಳ “ಸಾಂಸ್ಕೃತಿಕ ವೈಭವ–ಯುವಜನೋತ್ಸವ 2022” ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಆವರಣದ ಬಯಲು ರಂಗಮಂದಿರಲ್ಲಿ ಆಯೋಜಿಸಲಾಗಿದೆ.
ಸ್ವಾತಂತ್ರ್ಯ ಮಾಸದ ಸವಿ ಘಳಿಗೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಸಂಭ್ರಮದ ನಿಮಿತ್ತ ಆಯೋಜಿಸಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ 30 ವಿವಿಧ ಸ್ಪರ್ಧೆಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಮುಖ್ಯ ಆವರಣ ಸೇರಿದಂತೆ ವಿವಿಯ 3 ಸ್ನಾತಕೋತ್ತರ ಕೇಂದ್ರ ಹಾಗೂ 50ಕ್ಕೂ ಹೆಚ್ಚು ಕಾಲೇಜುಗಳಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ಪರ್ಧಾಳುಗಳಿಗೆ ವಿವಿಯ ಆವರಣದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿ ಸ್ಪರ್ಧೆಯ ತೀರ್ಪುಗಾರರಾಗಿ ಬೆಂಗಳೂರು, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ ನಗರಗಳಿಂದ ಪರಿಣಿತ ತೀರ್ಪುಗಾರರು ಆಗಮಿಸಲಿದ್ದಾರೆ. ಸ್ಪರ್ಧೆಗಳ ನೈಜತೆ ಕಾಪಾಡಲು ಮತ್ತು ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಬಾರಿ ಸ್ಥಳೀಯೇತರ ತೀರ್ಪುಗಾರರನ್ನು ಆಹ್ವಾನಿಸಿರುವುದಾಗಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ತಿಳಿಸಿದರು.
ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ್ರ ನಟಿ ಹಾಗೂ ಫಿಲಂಫೇರ್ ಪ್ರಶಸ್ತಿ ಪುರಸ್ಕೃತರಾದ ಮೇಘನಾ ಗಾಂವ್ಕರ್ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಸಿಂಡಿಕೇಟ್ ಸದಸ್ಯರುಗಳಾದ ಹೆಚ್. ಜಯಪ್ರಕಾಶ ಗೌಡ, ಡಾ. ಬಸವರಾಜ್ ವಿ. ಪೂಜಾರ್, ಡಾ. ಮಲ್ಲಿಕಾರ್ಜುನ ಮರ್ಚಡ್, ನರಸಿಂಹ ರಾಯಚೂರು, ಹೆಚ್. ಪದ್ಮ ವಿಠ್ಠಲ್, ಡಾ. ಅಜ್ಜಯ್ಯ ಎಂ., ಶ್ರೀಕೃಷ್ಣದೇವರಾಯ, ಹೆಚ್. ಇ. ದಾದಾ ಕಲಂದರ್ ಹಾಜರಿರುವರು. ಕುಲಸಚಿವರಾದ ಪ್ರೊ. ಎಸ್. ಸಿ. ಪಾಟೀಲ್, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓ. ಓಲೇಕಾರ, ವಿತ್ತಾಧಿಕಾರಿಗಳಾದ ಡಾ. ಕೆ. ಸಿ. ಪ್ರಶಾಂತ್ ಹಾಗೂ ಯುವಜನೋತ್ಸವ 2022ರ ಸಂಯೋಜಕರಾದ ಪ್ರೊ. ಎನ್ ಶಾಂತಾನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ನಿಕಾಯದ ಡೀನರು, ಸ್ನಾತಕೋತ್ತರ ಕೇಂದ್ರಗಳ ನಿರ್ದೇಶಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೊಧಕರು, ಬೋಧಕೇತರ ಸಿಬ್ಬಂದಿ ಇರಲಿದ್ದಾರೆ.
6ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಾಜಪ್ಪ ದಳವಾಯಿ ಆಗಮಿಸಲಿದ್ದಾರೆ.

ಕಲ್ಯಾಣ-ಕರ್ನಾಟಕ ಭಾಗದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಯುವಜನೋತ್ಸವ ವೇದಿಕೆಯಾಗಲಿದೆ. ಈ ಸ್ಪರ್ಧೆಯಿಂದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತರಲು ಸಹಕಾರಿಯಾಗಲಿದೆ.
-ಪ್ರೊ. ಸಿದ್ದು ಪಿ ಆಲಗೂರ, ಮಾನ್ಯ ಕುಲಪತಿಗಳು, ವಿಶ್ರೀಕೃವಿವಿ, ಬಳ್ಳಾರಿ.