ವಿದ್ಯಾರ್ಥಿಗಳಿಗಾಗಿ “ಇಂಟ್ರ್ಯಾಕ್ಟ್ ಕ್ಲಬ್” ಉದ್ಘಾಟನೆ

ಹುಬ್ಬಳ್ಳಿ, ಮಾ30: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಹೊಸೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 15ಕ್ಕೂ ಹೆಚ್ಚು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹೊಸ ಮಾದರಿಯ ‘ಇಂಟ್ರ್ಯಾಕ್ಟ್ ಕ್ಲಬ್’ನ್ನು ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಯ 16 ಶಿಕ್ಷಕರಿಗೆ ಅವರ ಶೈಕ್ಷಕಣಿಕ ಸೇವೆಯನ್ನು ಗುರುತಿಸಿ ಎನ್.ಬಿ.ಎ. ಅವಾರ್ಡ್ (ನೇಷನ್ ಬಿಲ್ಡರ್ ಅವಾಡ್ರ್ಸ್) ಕೊಟ್ಟು ಸನ್ಮಾನಿಸಲಾಯಿತು.
ನಂತರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿರುವ ಐವರು ಮಹಿಳೆಯರಾದ ತಾರಾದೇವಿ ವಾಲಿ, ಡಾ. ದೀಶಾ ಮದನ್, ಮಂಜಿರಿ ಮೊಕ್ತಾಲಿ, ಗೌರಿ ಹಿರೇಮಠ, ಉತ್ಕರ್ಷ ಪಾಟೀಲ ಇವರನ್ನು ಕ್ಲಬ್ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.
ಕ್ಲಬ್‍ನ ಡಿಸ್ಟ್ರಿಕ್ಟ್ ಗವರ್ನರ್ ಸಂಗ್ರಾಮ ಪಟೇಲ, ಅಸಿಸ್ಟಂಟ್ ಗವರ್ನರ್ ಪ್ರವೀಣ ಹೆಬಸೂರ, ಜಿಎಸ್‍ಆರ್ ರಾಜೇಶ್ವರಿ ವಾಸುಕಿ, ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರಾದ ರಾಧಿಕಾ ಗೋಖಲೆ, ಜ್ಯೋತಿ ನಡಕಟ್ಟಿ, ಡಾ. ನಾಗರೇಖಾ ಹೆಬಸೂರ, ಇನ್ನಿತರರು ಈ ಸಂದರ್ಭದಲ್ಲಿದ್ದರು.