ವಿದ್ಯಾರ್ಥಿಗಳಿಂದ ಹಿರೆಕೆರೆ ಏರಿಯ ಸ್ವಚ್ಛತೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.16: ಪಟ್ಟಣಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹಿರೆಕೆರೆ ಏರಿಯ ಮೇಲೆ ವಿದ್ಯಾರ್ಥಿಗಳು ಸ್ವಚ್ಫತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಗೆ ಹಾಕಿರುವ ಹಾಸನಗಳು ಕಾಣದಂತೆ ಬೆಳೆದಿದ್ದ ಗಿಡಗಂಟಿಗಳು, ಕುಡಿದು ಬಿಸಾಕಿರುವ ಗಾಜು ಹಾಗೂ ನೀರಿನ ಬಾಟಲುಗಳು, ಪ್ಲಾಸ್ಟಿಕ್ ಮುಂತಾದ ಅಪಾಯಕಾರಿ ಕೊಳೆಯಲಾಗದ ವಸ್ತುಗಳು ಎಲ್ಲೆಂದರಲ್ಲಿ ಬಿಸಾಕಿದು ಜನರು ಏರಿಯ ಮೇಲೆ ಹೊಗಲು ಆಗದಷ್ಟು ಮಾಲಿನ್ಯದಿಂದ ಕೂಡಿತ್ತು ಹಾಗಾಗಿ ಪ್ರತಿ ದಿನ ಗಮನಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಮೇಲ್ವಿಚಾರಕದ ಬಿ.ಹೆಚ್.ಚಂದ್ರಪ್ಪ ತಮ್ಮ ಹಾಸ್ಟೇಲ್ ನಾ ವಿದ್ಯಾರ್ಥಿಗಳನ್ನು ಕರೆತಂದು ಅವರ ಮುಂದಾಳತ್ವದಲ್ಲಿ ಸ್ವಚ್ಛತೆಗೊಳಿಸಿದರು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧ್ಯಕ್ಷ ಹೆಚ್.ಅಶೋಕ್, ಹಾಗೂ ಮುಖ್ಯಾಧಿಕಾರಿ ಶಿವಕುಮಾರ್ ಎರೆಗುಡಿ, ಹಿರಿಯ ಆರೋಗ್ಯ ಪರಿವೀಕ್ಷಕ ಮಂಜುನಾಥ್ ಆಗಮಿಸಿ ಟ್ರಾಕ್ಟರ್ ಮೂಲಕ ಕಸ ಸಾಗಿಸಲು ವ್ಯವಸ್ಥೆ ಮಾಡಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರಸಭೆ ಅಧ್ಯಕ್ಷ ಅಶೋಕ್ ಹರಾಳ್ ಮಾತನಾಡಿ ವಿದ್ಯಾರ್ಥಿಗಳ ಶ್ರಮದಾನದ ಕೆಲಸವು ಸಾರ್ಥಕವಾದದ್ದು ಇಂತಹ ಒಳ್ಳೆಯ ಕೆಲಸ ಮಾಡುವ ಮೂಲಕ ನಿಮ್ಮ ವಿದ್ಯಾರ್ಥಿ ಜೀವನದಲ್ಲಿಯೂ ಯಶಸ್ಸು ಸಾಧಿಸಬೇಕೆಂದು ವಿದ್ಯಾರ್ಥಿಗಳಿಗೆ ಆಶಯದ ಮಾತುಗಳನ್ನು ಆಡಿದರು
ಮುಖ್ಯಾಧಿಕಾರಿ ಶಿವಕುಮಾರ್. ಎರೆಗುಡಿ ಮಾತನಾಡಿ ಪ್ರಕೃತಿಯನ್ನು ರಕ್ಷಿಸುವ ಮೂಲಕ ನಾವು ಹಾಗೂ ನಮ್ಮ ಮುಂದಿನ ಪೀಳಿಗೆಗೆ ಒಳಿತು ಮಾಡಬೇಕಾಗಿದೆ ಪ್ರಕೃತಿ ಸರಿ ಇದ್ದರೆ ಪರಿಸರ ಸಮತೋಲನ ಸಾಧ್ಯವೆಂದರು.
ಜೀವಜಲ ಟ್ರಸ್ಟ್ ನ ಅಧ್ಯಕ್ಷರಾದ ಹೇಮಣ್ಣ ಮೋರಿಗೇರಿ ಮಾತನಾಡಿ ಎಲ್ಲಾದನ್ನು ಸರ್ಕಾರವೇ ಮಾಡಲಿ ಎನ್ನುವುದಕ್ಕಿಂತ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಮೂಹ ಇಂತಹ ಜಾಗೃತಿ ಕಾರ್ಯಕೈಗೊಂಡಾಗ ಮಾತ್ರ ಯಶಸ್ವಿಯಾಗುತ್ತವೆ.ಅದರಲ್ಲೂ ಮುಖ್ಯವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಕಾರ್ಯದಲ್ಲಿ ತೊಡಗಿಕೊಂಡಾಗ ಸುಖೀ ಹಾಗೂ ಸುಂದರ ಸಮಾಜವಾಗಲು ಸಾಧ್ಯ, ಇಂತಹ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದವರು ನೆರ ಊರುಗಳಿಂದ ವಿದ್ಯಾಭ್ಯಾಸಕ್ಕೆ ಬಂದವರಾಗಿದ್ದಾರೆ ನಮ್ಮೂರಿನ ಜನರೂ ಸಹ ಇದರ ಬಗ್ಗೆ ಗಮನ ಹರಿಸಬೇಕಿದೆ ಪಟ್ಟಣದ ಸಾರ್ವಜನಿಕರು, ಯುವಕರು ಇಂತಹ ಅರಿವು ಮತ್ತು ಪರಿಸರ ಪೂರಕ ಕೆಲಸಕ್ಕೆ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕೆಂದರು.
 ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಹಾಜರಿದ್ದರು

Attachments area