ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ

ಕಲಬುರಗಿ,ಫೆ.21-ಪಂಡಿತ್ ಡಿ.ವಿ.ಪ್ರಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ವಿವೇಕಾನಂದ ಸಂಗೀತ ವಿದ್ಯಾಲಯದ 9ನೇ ವಾರ್ಷಿಕೋತ್ಸವ ಅಂಗವಾಗಿ ಕರುಣೇಶ್ವರ ನಗರದ ಕೋರಿಸಿದ್ದೇಶ್ವರ ಮಠದ ಆವರಣದಲ್ಲಿ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಮೊದಲಿಗೆ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ಒಂದೇ ಮಾತರಂ ಗೀತೆ ಹಾಡಿದರು. ನಂತರ ವಿದ್ಯಾರ್ಥಿಳಿಂದ ವೈಯಕ್ತಿಕ ಸಂಗೀತ ಪ್ರದರ್ಶನ ನಡೆಯಿತು. ಸುಕ್ರುತ್, ಮಂಥನ್, ಶಿವಾನಿ, ಶ್ರಾವಣಿ, ರುತು, ಪೂಜಾ, ಭಾವನಾ, ಚೇತನ, ಪ್ರಶಾಂತ, ಪ್ರಕಾಧ, ಮಹಾಲಕ್ಷ್ಮೀ ಹಾಗೂ ಸಿದ್ದಲಿಂಗ ಮಾಹೂರ ಸಂಗೀತ ಪ್ರದರ್ಶನ ನೀಡಿದರು.
ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಣ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಡಿಡಿಪಿಐ ಕೆ.ಎಸ್.ಹಿರೇಮಠ, ಉದ್ಯಮಿಗಳಾದ ಚನ್ನಬಸಪ್ಪ ಬಿರಾದಾರ, ಶಿವಶರಣಪ್ಪ ಹೂಗಾರ, ಹಣಮಂತರಾವ ಹರಸೂರ, ಎಚ್.ಡಿ.ಪಾಟೀಲ, ಬಸವರಾಜ ಕಲೋಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸಂಸ್ಥೆ ಅಧ್ಯಕ್ಷ ನಾಗರಾಜ ಎಂ.ಪುರಮಕರ ವಂದಿಸಿದರು.