
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.07: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ತೆಕ್ಕಲಕೋಟೆ ಪಟ್ಟಣ ಸೇರಿದಂತೆ ಬಲುಕುಂದಿ, ಹಳೆಕೋಟೆ, ಉಪ್ಪರಹೊಸಳ್ಳಿ, ನಿಟ್ಟೂರು ಹಲವಾರು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬಳ್ಳಾರಿ ನಗರಕ್ಕೆ ಹೋಗುತಿದ್ದು, ಅದರೆ ಎರಡು ತಿಂಗಳಿಂದ ಪಟ್ಟಣದಲ್ಲಿ ಬಸ್ಸುಗಳನ್ನು ನಿಲ್ಲಿಸದೆ ಹಾಗೆ ಹೋಗುವ ಕಾರಣದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತಿದ್ದು ಇದರಿಂದಾಗಿ ಇಂದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಸಿರುಗುಪ್ಪ ಡಿಪೋದ ಬಹಳಷ್ಟು ಬಸ್ಸುಗಳು ತಡೆರಹಿತ ವಾಗಿ ಚಲಿಸುತಿದ್ದು ಕಡ್ಡಾಯವಾಗಿ ತೆಕ್ಕಲಕೋಟೆ ಪಟ್ಟಣದಲ್ಲಿ ನಿಲುಗಡೆಗೆ ಆಗ್ರಹಿಸಿ ಇನ್ನು ಕೆಲ ಬಸ್ಸುಗಳು ವಿದ್ಯಾರ್ಥಿಗಳ ಬಸ್ ಪಾಸ್ ಅನುಮತಿ ಇಲ್ಲವೆಂದು ನಾಮ ಫಲಕ ಹಾಕಿಕೊಂಡಿರುತ್ತರೆ ರಾಷ್ಟ್ರೀಯ ಹೆದ್ದಾರಿ ಮೇಲೆ ನಿಲ್ಲಿಸುವ ಬಸ್ಸುಗಳು, ಪಟ್ಟಣದ ಬಸ್ಸು ನಿಲ್ದಾಣದ ಒಳಗೆ ಬರುವುದಿಲ್ಲ ಎಂದು ಪ್ರತಿಭಟಿಸಿದರು.
ವಿದ್ಯಾರ್ಥಿಗಳು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಅಳಲು ತೊಡಗಿಕೊಂಡರು, ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರು ಸಮಸ್ಯೆ ಪರಿಹರಿಸುವ ಬಗ್ಗೆ ಹೇಳಿದರು.
ಘಟನ ಸ್ಥಳಕ್ಕೆ ಆಗಮಿಸಿದ ಸಿರುಗುಪ್ಪ ತಾಲ್ಲೂಕಿನ ಡಿಪೋ ವ್ಯವಸ್ಥಾಪಕ ತಿರುಮಲೇಶ ಸೂಕ್ತವಾದ ಕ್ರಮ ಕೈಗೊಂಡು ಸಮಯಕ್ಕೆ ಸರಿಯಾಗಿ ಬಸ್ ಬಿಡುವುದಾಗಿ ತಿಳಿಸಿದರು, ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
One attachment • Scanned by Gmail