ವಿದ್ಯಾರ್ಥಿಗಳಿಂದ ಬುದ್ಧ ಪೂರ್ಣಿಮೆ ಆಚರಣೆ.


ಸಿರಿಗೇರಿ ಮೇ.7.  ಗ್ರಾಮದ ವಿವೇಕಾನಂದ ಪ್ರೌಢಶಾಲೆಯ ಆವರಣದಲ್ಲಿ, ದಲಿತ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಘಟಕ ಹಾಗೂ ಬೇಸಿಗೆಯ ರಜೆ ಪ್ರಯುಕ್ತ ಡಿ ವಿ ಪಿ ವತಿಯಿಂದ ಆಯೋಜನೆಗೊಳಿಸಿದ್ದ, ಸರ್ಕಾರಿ ಮತ್ತು ಪ್ರತಿಷ್ಠಿತ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ತರಬೇತಿಯ ತರಗತಿಗೆ ಹಾಜರಿದ್ದ ವಿದ್ಯಾರ್ಥಿಗಳಿಂದ ಗೌತಮ ಬುದ್ಧರ 2567ನೇ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು. ಬುದ್ಧನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ನಂತರ, ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಎಚ್. ಲಕ್ಷ್ಮಣ ಬಂಡಾರಿ ಮಾತನಾಡಿ ಬುದ್ಧರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಬಹುದು. ಧಾವಂತದ ಈ ಜೀವನಶೈಲಿಯಲ್ಲಿ ಬುದ್ಧರ ಉಪದೇಶಗಳು ನಮಗೆ ಅತ್ಯಂತ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಅವರ ಜೀವನ ಉಪದೇಶಗಳನ್ನು ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿಗಳಾಗಿ, ಸಾಧನೆಯಲ್ಲಿ ತೊಡಗಬೇಕೆಂದು ತಿಳಿಸಿದರು. ನಂತರ ಕೆಲ ವಿದ್ಯಾರ್ಥಿಗಳು ಬುದ್ಧರ ಕುರಿತು ತಮ್ಮ ಮಾತುಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳಾದ ಉಮೇಶ. ಸಣ್ಣಮಂಜು. ಸಂತೋಷ್ ಕುಮಾರ. ಹುಲುಗಪ್ಪ, ವೆಂಕಟೇಶ್, ಗಂಗಮ್ಮ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.