ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು : ಶಿವಾನಂದ ದಿವಾನಮಳ

ಅಥಣಿ :ಜ.21: ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಶ್ರೀ ಮರುಳಶಂಕರ ದೇವರು ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ಶಾಲೆಯ ಆವರಣದಲ್ಲಿ ಇಂದು ಜನ್ಮದಾತರಿಗೆ ಪಾದಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು.
ಶಾಲೆಯ 34 ನೇ ವಾರ್ಷಿಕ ಸ್ನೇಹ ಸಮ್ಮೇಳನ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿನಲ್ಲಿ ನಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕಾಣಿ ಕೊನೆತನಕ ಸಲಹುವ ಶಪಥ ಗೈಯ್ದರು.
ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕøತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀ ಮರುಳಸಿದ್ಧ ಮಹಾಸ್ವಾಮಿಗಳು ಶೆಟ್ಟರಮಠ ಇವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಗುರುಮಾತೆ ಎಮ್ ಎಸ್ ಕಲ್ಮಟ್ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ದಿವಾನಮಳ್ಳ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಶಿಕ್ಷಣವೆಂದರೆ ಅದು ಕೇವಲ ಪಠ್ಯಕ್ರಮವಲ್ಲ. ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು. ಮಕ್ಕಳು ಮೊಬೈಲ್ ನೊಂದಿಗೆ ಹೆಚ್ಚಿನ ನಂಟು ಹೊಂದಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಮಕ್ಕಳು ಸನ್ಮಾರ್ಗದಲ್ಲಿ ಸಾಗಿಸುವ ಕರ್ತವ್ಯ ಪಾಲಕರ ಮತ್ತು ಶಿಕ್ಷಕರ ಮೇಲಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಬಾಲ್ಯದಲ್ಲಿಯೇ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕು. ಸಮಾಜದಲ್ಲಿವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿ ಪಾಲಕರು ಬದುಕಿನ ಸಂಧ್ಯಾಕಾಲದಲ್ಲಿ ಮಕ್ಕಳೊಂದಿಗೆ ಬದುಕುವ ಸ್ಥಿತಿ ನಿರ್ಮಾಣವಾಗಬೇಕು ಎಲ್ಲ ಧರ್ಮ ಗ್ರಂಥಗಳಲ್ಲಿ ತಂದೆ ತಾಯಿಗಳಲ್ಲಿ ದೇವರನ್ನು ಕಾಣು ಎಂಬ ಉಲ್ಲೇಖವಿದೆ, ಮಕ್ಕಳಲ್ಲಿ ಒಬ್ಬ ಒಳ್ಳೆಯ ನಾಗರೀಕನಾಗಲು ಬೇಕಾದ ಗುಣಗಳನ್ನು ಬೆಳೆಸಬೇಕು. ಮನೆ ಮತ್ತು ಶಾಲೆ ಎರಡರಲ್ಲೂ ಉತ್ತಮ ವಾತಾವರಣ ನಿರ್ಮಿಸಬೇಕು. ದಿನನಿತ್ಯ ಪಾಲಕರಿಗೆ ವಂದಿಸಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ಕೊಟ್ಟರು,
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಮರುಳಸಿದ್ಧ ಮಹಾ ಸ್ವಾಮೀಜಿಯವರು ಮಾತನಾಡಿ ತಾಯಿಯೇ ಮೊದಲ ಗುರು ಎಂಬುದು ಎಲ್ಲರೂ ಅರಿಯಬೇಕು. ಮಕ್ಕಳ ಪಾಲನೆ ಪೆÇೀಷಣೆಯೊಂದಿಗೆ ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶ್ರಮಿಸಬೇಕು, ಅದರಲ್ಲೂ ಮುಖ್ಯವಾಗಿ ತಂದೆ ತಾಯಿಗಳು ಮನೆಯಲ್ಲಿ ಮಕ್ಕಳ ಮುಂದೆ ಕೆಟ್ಟದಾಗಿ ನೆಡೆದುಕೊಳ್ಳಬಾರದು ಏಕೆಂದರೆ ನಿಮ್ಮ ನಡೆನುಡಿ ಆಚಾರ ವಿಚಾರಗಳು ಮಕ್ಕಳ ಮೇಲೆ ಮಾನಸಿಕ ಪರಿಣಾಮ ಬೀರುತ್ತವೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು,
ಪಾಲಕರ ಪ್ರತಿನಿಧಿಯಾಗಿ ಶಂಕರ ಕಮತಗಿ ಮಾತನಾಡಿ, ಮಕ್ಕಳನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯುವುದಕ್ಕೆ ಮರುಳ ಶಂಕರ ಶಾಲೆಯು ಪ್ರಮುಖ ಪಾತ್ರ ವಹಿಸುತ್ತಿದೆ ಇಂತಹ ಸಂಸ್ಕೃತಿ ಕೇವಲ ನಮ್ಮ ದೇಶದಲ್ಲಿಯೇ ಇದೆ ಮತ್ತು ಮಕ್ಕಳ ಭವಿಷ್ಯತ್ತಿನ ಅಡಿಪಾಯ ಈ ಶಾಲೆಯಲ್ಲಿ ಗಟ್ಟಿಯಾಗಿ ಮೂಡುತ್ತಿದೆ ಎಂದು ಹೇಳಿದರು.
ಶಾಲೆಗೆ ತಂದೆ-ತಾಯಿಯನ್ನು ಕರೆದುಕೊಂಡು ಬಂದಿದ್ದ ವಿದ್ಯಾರ್ಥಿಗಳು ಅವರನ್ನು ಕುರ್ಚಿ ಮೇಲೆ ಕೂರಿಸಿ, ಪಾದ ತೊಳೆದು, ಪುಷ್ಪ ಅರ್ಪಿಸಿ ನಮಸ್ಕರಿಸಿದರು,
ಸಂಸ್ಥೆಯ ಕಾರ್ಯದರ್ಶಿ ರಾಮನಗೌಡ ಪಾಟೀಲ ಅತಿಥಿ ಪರಿಚಯ ಮಾಡಿ ಸ್ವಾಗತಿಸಿದರು,
ಕೆ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜಶ್ರೀ ಆಲಬಾಳ, ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಸದಸ್ಯ ಅರುಣ ಬಾಸಿಂಗಿ, ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶಂಕರ ಗಡದೆ, ಸಂಜಯ ಹಣಮಾಪೂರ, ಗಿರೀಶ್ ದಿವಾನಮಳ, ಸಂಸ್ಥೆಯ ಆಡಳಿತಾಧಿಕಾರಿ ವಿ ಎ ನಾಗನಿ, ಶಿಕ್ಷಕರಾದ ಎನ್ ಜಿ ಚನಗೌಡರ, ಆರ್ ಬಿ ಸಿರಗುಪ್ಪಿ, ಎಸ್ ಜೆ ಪಟೇಲ್, ಬಿ ಆರ್ ಕುಂಬಾರ, ಎಮ್ ಎಮ್ ಹುದ್ದಾರ, ಆರ್ ಎಮ್ ಮಾಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು
ಶಿಕ್ಷಕರಾದ ಕೆ ಎ ಹಿಡಕಲ್, ಎ ಎಸ್ ಅವಟಿ ಹಾಗೂ ವಿದ್ಯಾರ್ಥಿನಿ ಸ್ಪಂದನಾ ಕಮತಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು,