ವಿದ್ಯಾರ್ಥಿಗಳಿಂದ ಪಾದಯಾತ್ರೆ

ಧಾರವಾಡ, ಜು.27: ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದ ಸೇರಿ ಸ್ವಾತಂತ್ರ್ಯ ಹೊರಾಟಗಾರರ ಸವಿನೆನಪಿಗಾಗಿ ವೇಷಭೂಷಣದೊಂದಿಗೆ ಪಾದಯಾತ್ರೆಯನ್ನು ಸ್ಥಳೀಯ ಜಕಣಿಬಾವಿ ರಸ್ತೆಯಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಉದಯ ಯಂಡಿಗೇರಿ ಮಾತನಾಡಿ, ಹುತಾತ್ಮರ ಹೊರಾಟದ ರೂಪರೇಷಗಳ, ಸಾಧನೆ ಬಗ್ಗೆ ವಿವರಿಸಿದರು. ಪ್ರಾಚಾರ್ಯೆ ಡಾ.ಸರಸ್ವತಿ ಕಳಸದ, ಕ್ರೀಡಾ ಸಂಚಾಲಕ ಆರ್.ಬಿ.ಸೋನೆಖಾನ, ಸಾಂಸ್ಕ್ರತಿಕ ಸಂಚಾಲಕಿ ಗರೀಜಾ ಮೂಲಿಮನಿ, ಸಿಡಿಸಿ ಸದಸ್ಯರಾದ ಮೋಹನ ಸಿದ್ದಾಂತಿ, ವಿರೇಶ ಕೆಲಗೇರಿ ಭಾಗವಹಿಸಿದ್ದರು.