ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಅಗತ್ಯ:ಗುಡದಿನ್ನಿ

ತಾಳಿಕೋಟೆ:ಮಾ.21: ಇಂದಿನ ವಿಧ್ಯಾರ್ಥಿಗಳಲ್ಲಿ ಓದು ಬರಹದ ಜೊತೆಗೆ ಸ್ಪರ್ದಾತ್ಮಕ ಪರಿಕ್ಷೆಗಳನ್ನು ಎದುರಿಸುವ ಮನೋಭಾವನೆ ಅಗತ್ಯವಾಗಿದೆ ಅಂತಹ ಸ್ಪರ್ದಾತ್ಮಕ ಪರಿಕ್ಷೆಗಳನ್ನು ನಡೆಸುವ ಮೂಲಕ ವಿಕಾಸ ಪಬ್ಲಿಕ್ ಸ್ಕೂಲ್‍ನ ಕೌಟಿಲ್ಯ ಅಕಾಡೆಮಿ ಮತ್ತು ಹುಬ್ಬಳ್ಳಿಯ ಸುಕೃತಿ ವಿಜ್ಞಾನ ಪಧವಿ ಪೂರ್ವ ಕಾಲೇಜು ಮಾಡುತ್ತಾ ಸಾಗಿರುವದು ಹೆಮ್ಮೆಯ ವಿಷಯವಾಗಿದೆ ಎಂದು ರಾಯಚೂರದ ಸಾಹಿತಿ ಶರಣಬಸವ ಗುಡದಿನ್ನಿ ಅವರು ಹೇಳಿದರು.
ಪಟ್ಟಣದ ವಿಕಾಸ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕೌಟಿಲ್ಯ ಅಕಾಡೆಮಿ ಮತ್ತು ಹುಬ್ಬಳ್ಳಿ ಸುಕೃತಿ ವಿಜ್ಞಾನ ಪಧವಿ ಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾದ ಜೀನಿಯಸ್ ಅವಾರ್ಡ-2024 ಪರಿಕ್ಷಾ ನಂತರ ನಡೆದ ವಿಜೇತ ವಿಧ್ಯಾರ್ಥಿಗಳಿಗೆ ಭಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಹುಟ್ಟುವಾಗ ಏನು ಇರುವದಿಲ್ಲಾ ಹುಟ್ಟಿದ ಮೇಲೆ ಹೆಸರು ಬರುತ್ತದೆ ಆ ಹೆಸರು ಚೀರಸ್ಮರಣಿಯವಾಗಿ ಹುಳಿಯುವಂತೆ ಬಧುಕಬೇಕು ಸ್ಪರ್ದೆಯಲ್ಲಿ ಸೋಲು ಗೆಲುವು ಸಹಜವಾಗಿದೆ ಅದನ್ನು ಮೆಟ್ಟಿ ನಿಲ್ಲುವಂತಹ ಸ್ಪರ್ದೆಗಳಲ್ಲಿ ಒಂದಾಗಿರುವ ಸ್ಮರ್ದಾತ್ಮಕ ಪರಿಕ್ಷೆಗಳನ್ನು ಎದುರಿಸಿ ದೇಶದ ಇತಿಹಾಸ ಪುಟಗಳಲ್ಲಿ ಉಳಿಯುವಂತಹ ಕಾರ್ಯ ವಿಧ್ಯಾರ್ಥಿಗಳು ಮಾಡಬೇಕು ಪಾಲಕರು ಮಕ್ಕಳಿಗೆ ಓದು ಬರಹ ಕಲಿಸಿದರೆ ಸಾಲದು ಇಂತಹ ಸ್ಪರ್ದಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೇರೆಪಿಸುವಂತಹ ಕೆಲಸ ಮಾಡಬೇಕು ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಬ್ಬಳ್ಳಿಯ ಸುಕೃತಿ ವಿಜ್ಞಾನ ಪಧವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಜಗದೀಶ ಶಟ್ಟರ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ವಿಧ್ಯಾರ್ಥಿಗಳು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ ಅವರನ್ನು ಸರಿ ದಾರಿಗೆ ತರುವ ಕಾರ್ಯ ಮಾಡಬೇಕಾಗಿದೆ ಇಂತಹ ಸ್ಪರ್ದಾತ್ಮಕ ಪರಿಕ್ಷೆಗಳಲ್ಲಿ ಪಾಲ್ಗೊಳ್ಳುವದರೊಂದಿಗೆ ಉನ್ನತ ಶಿಕ್ಷಣದ ಕಡೆಗೆ ವಿಧ್ಯಾರ್ಥಿಗಳು ದಾಪುಗಾಲು ಹಾಕಬೇಕು ಸುಕೃತಿ ಕಾಲೇಜ್ ವತಿಯಿಂದ ಬಡ ವಿಧ್ಯಾರ್ಥಿಗಳಿಗಾಗಿ ಪ್ರತಿ ವರ್ಷ 50 ಲಕ್ಷ ರೂ. ವಿಧ್ಯಾರ್ಥಿ ವೇತನವನ್ನು ನೀಡುತ್ತಿದೆ ಅದರಂತೆ ತಾಳಿಕೋಟೆಯ ವಿಕಾಸ ಪಬ್ಲಿಕ್ ಸ್ಕೂಲ್‍ನ ಕೌಟಿಲ್ಯ ಅಕಾಡೆಮಿಯು ಕೂಡಾ ಬಡ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ವಿಧ್ಯಾರ್ಥಿ ವೇತನವನ್ನು ಬಳಕೆ ಮಾಡಲು ಮುಂದೆ ಬಂದಿರುವದು ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೇರೆಪಿಸಿದಂತಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಕೈಲಾಸ ಪೇಠೆಯ ಶ್ರೀ ಬಸವಪ್ರಭು ದೇವರು ಮಾತನಾಡಿ ಸ್ಪರ್ದಾತ್ಮಕ ಜಗತ್ತಿನಲ್ಲಿ ಇಂತಹ ಪರಿಕ್ಷೆಗಳು ಅಗತ್ಯವಾಗಿದೆ ಬಡವ, ಶ್ರೀಮಂತರೆನ್ನದೇ ಎಲ್ಲರನ್ನು ಸಮಾನರನ್ನಾಗಿ ಕರೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡಲು ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿ ವೇತನದ ಮೂಲಕ ಮುಂದೆ ಬಂದಿರುವದು ಸಂತಸದ ಸಂಗತಿಯಾಗಿದೆ ವಿಧ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸ್ಪರ್ದಾತ್ಮಕ ಪರಿಕ್ಷೆ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡು ದೇಶದ ಉನ್ನತ ಸ್ಥಾನಕ್ಕೆ ತಲುಪಬೇಕೆಂದರು.
ಇದೇ ಸಮಯದಲ್ಲಿ ವಿಕಾಸ ಪಬ್ಲಿಕ್ ಸ್ಕೂಲ್‍ನ ಕೌಟಿಲ್ಯ ಅಕಾಡೆಮಿ ವತಿಯಿಂದ 4ನೇ ವರ್ಗದ ಮಕ್ಕಳಿಗಾಗಿ ನಡೆಸಿದ ಜಿನಿಯಸ್ ಅವಾರ್ಡ ಪರಿಕ್ಷೆಯಲ್ಲಿ 25 ಜನ ವಿಧ್ಯಾರ್ಥಿಗಳು ಟಾಫ್-10 ಬಂದಿದ್ದರಿಂದ ಅವರಿಗೆ ನಗದು ಭಹುಮಾನ ಮತ್ತು ವಿಧ್ಯಾರ್ಥಿವೇತನವನ್ನು ನೀಡಲಾಯಿತು. ಅದರಂತೆ ಹುಬ್ಬಳ್ಳಿಯ ಸುಕೃತಿ ವಿಜ್ಞಾನ ಪಧವಿ ಪೂರ್ವ ಕಾಲೇಜ್ ವತಿಯಿಂದ ನಡೆಸಿದ ಸುಕೃತಿ ಟ್ಯಾಲೆಂಟ್ ಅವಾರ್ಡನಲ್ಲಿ ವಿಜೇತರಾದ 10 ವಿಧ್ಯಾರ್ಥಿಗಳಿಗೆ ನಗದು ಭಹುಮಾನ ಮತ್ತು ವಿಧ್ಯಾರ್ಥಿ ವೇತನವನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸ ಪಬ್ಲಿಕ್ ಸ್ಕೂಲ್‍ನ ಅಧ್ಯಕ್ಷ ರಾಮನಗೌಡ ಬಾಗೇವಾಡಿ ಅವರು ವಹಿಸಿದ್ದರು.
ಇದೇ ಸಮಯದಲ್ಲಿ ಕೌಟಿಲ್ಯ ಅಕಾಡೆಮಿ ವತಿಯಿಂದ ನಡೆಸಲಾದ 4ನೇ ವರ್ಗದ ವಿಧ್ಯಾರ್ಥಿಗಳ ಸ್ಪರ್ದಾತ್ಮಕ ಪರಿಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ ಶಶಿಕಾಂತ ತಮದಡ್ಡಿ, ಸುಕೃತಿ ವಿಜ್ಞಾನ ಪ.ಪೂ.ಕಾಲೇಜ್ ವತಿಯಿಂದ ನಡೆಸಲಾದ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿಗಳ ಸ್ಪರ್ದಾತ್ಮಕ ಪರಿಕ್ಷೆಯಲ್ಲಿ ವಿಜೇತರಾದ ಮಿಸಭಾ ಅತ್ತಾರ, ಪೂರ್ವಿಕಾ ನಂದೆಪ್ಪನವರ ಅವರಿಗೆ ಅವಾರ್ಡ ಘೋಷಿಸುವದರ ಜೊತೆಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಚಂದ್ರಶೇಖರಯ್ಯ ನಂದಿಕೋಲಮಠ, ಶ್ರೀಮತಿ ಶರಣಮ್ಮ ಸಜ್ಜನ, ಸುಕೃತಿ ಪಿಯು ಕಾಲೇಜ್ ಉಪಾಧ್ಯಕ್ಷ ಪ್ರಮೋದ, ಪ್ರಾಚಾರ್ಯ ಬಸವರಾಜ ಎಸ್.ಎಚ್., ಮೊದಲಾದವರು ಇದ್ದರು.
ಗುರುಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಅಶೋಕ ಸಜ್ಜನ ನಿರೂಪಿಸಿದರು. ಶಿಕ್ಷಕ ದೇವರಾಜ ದೇಸಾಯಿ ವಂದಿಸಿದರು.