ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಪರಂಪರೆ, ಧೈರ್ಯ, ಕ್ಷಮತೆಯಂತಹ ಗುಣಗಳನ್ನು ರೂಡಿಸಬೇಕಾಗಿದೆ: ಡಾ. ಮೇತ್ರಿ

ವಿಜಯಪುರ, ಏ.22-ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಪರಂಪರೆ, ಸಂಸ್ಕøತಿ, ಧೈರ್ಯ, ಕ್ಷಮತೆಯಂತಹ ಗುಣಗಳನ್ನು ರೂಡಿಸಬೇಕಾಗಿದೆ. ಅವರಲ್ಲಿ ಆತ್ಮಸ್ಥೈರ್ಯದ ಜೊತೆಗೆ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುವ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದು ಡಾ. ಸಂಗಮೇಶ ಮೇತ್ರಿ ಹೇಳಿದರು.
ಅವರು ವಿಜಯಪುರದ ಎಕ್ಸಲೆಂಟ್ ಪಿ.ಯು. ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡ ಭಾರತೀಯ ಶಿಕ್ಷಣ ಮಂಡಲದ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀರಾಮ ನವಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕತೆ ಶಿಕ್ಷಣದ ಬೆನ್ನುಬಿದ್ದು ನಮ್ಮ ಮಕ್ಕಳು ಸಂಕುಚಿತ ಮನೋಭಾವದಿಂದ ಅಂಕ-ರ್ಯಾಂಕ್ ಗಳಿಗೆ ಬೆನ್ನೇರಿ ಸಂಸ್ಕಾರಯುತ ವಾಸ್ತವಿಕ ಬದುಕಿನ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ. ಹಾಗಾಗಿ ಮೌಲ್ಯಯುತ ಶಿಕ್ಷಣ ನೀಡಲು ಮುಂದಾಗಬೇಕಿದೆ ಎಂದರು.
ಪತ್ರಕರ್ತ ಅಕ್ಷಯ ಕುಲಕರ್ಣಿ ಮುಖ್ಯ ವಕ್ತಾರರಾಗಿ ಮಾತನಾಡಿ, ಮಕ್ಕಳಲ್ಲಿ ಜ್ಞಾನ, ಕೌಶಲ್ಯದ ಕಲಿಕೆಯಿಂದಾಗಿ ಸ್ವಂತ ನಿರ್ಣಯ ಮಾಡುವ ಸಾಮಥ್ರ್ಯ ಬೆಳೆಯುತ್ತದೆ. ವಿದ್ಯಾರ್ಥಿಗಳು ಕ್ರೀಯಾ ಕೌಶಲ್ಯಗಳನ್ನು ಆಧರಿಸಿ ಕಲಿಕೆ ರೂಪುಗೊಂಡ ಕಾರಣ ತನ್ನದೇ ಆದ ಜೀವನ ವಿಧಾನ ಆರಂಭಿಸಲು ಸಮರ್ಥನಾಗುತ್ತಾನೆ ಎಂದರು.
ವಿದ್ಯಾರ್ಥಿಗಳಲ್ಲಿ ಕೌಶಲ ಕಲಿಕೆಗೆ, ವೃತ್ತಿಪರ ಕಲಿಕೆಗೆ ಒತ್ತು ನೀಡಿ ಮಕ್ಕಳನ್ನು ಭಾರತೀಯ ಜ್ಞಾನ ಪರಂಪರೆಯನ್ನು ರೂಡಿಸಿಕೊಳ್ಳಲು ಅಣಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಭಾರತೀಯ ದೃಷ್ಟಿಕೋನದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಕ್ರಮ, ಶೈಕ್ಷಣಿಕ ವ್ಯವಸ್ಥೆ ಮತ್ತು ವಿಧಾನಗಳನ್ನು ವಿಕಸಿಸುವ ಗುರಿಯನ್ನು ಹೊಂದಬೇಕಾಗಿದೆ ಎಂದು ಶಾಲಾ ಪ್ರಕಲ್ಪ ಸಹಪ್ರಮುಖ ಸಂತೋಷ ಬಂಡೆ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಬಸವರಾಜ ಕವಲಗಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಾಗಬೇಕು. ಭಾರತೀಯ ಸಂಸ್ಕøತಿಯು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಬಿಂಬಿತವಾಗಬೇಕು. ಅಂತಹ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಿ.ಎಲ್. ಬನಸೋಡೆ ಡಾ. ಎಸ್.ಟಿ. ಬೋಳರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಸುನೀತಾ ಪಾಟೀಲ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಆನಂದ ಹುಲಮನಿ ಸ್ವಾಗತಿಸಿದರು. ಶಂಕರಗೌಡ ಗೌಡರ ನಿರೂಪಿಸಿದರು. ಪ್ರೊ. ಶರಣಗೌಡ ಪಾಟೀಲ್ ವಂದಿಸಿದರು.