ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಯಲಿ:ಗುಬ್ಬೇವಾಡ

ತಾಳಿಕೋಟೆ:ಜು.30: ಈ ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ನಮ್ಮ ಪ್ರಾಣವನ್ನು ನೀಡಿದ್ದಾರೆ ಅಂತವರಲ್ಲಿ ಕೆಲವರು ಬೆಳಕಿಗೆ ಬಂದರೆ ಇನೂ ಕೆಲವರು ಬೆಳಿಕಿಗೆ ಬಂದಿಲ್ಲಾ ಅಂತವರನ್ನು ಗುರುತಿಸುವಂತಹ ಕೆಲಸ ಮಾನಸ ಪ್ರಕಾಶನ ಮಾಡಿದ್ದು ಸ್ವಾತಂತ್ರ್ಯ ಯೋಧರ ಸ್ಮರಿಸುವದರೊಂದಿಗೆ ರಾಷ್ಟ್ರ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ರಾಯಬಾಗ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಮಾನಸ ಪ್ರಕಾಶನ ಮತ್ತು ಶ್ರೀ ಸಂಗಮೇಶ ಗ್ರಾಮಾಭಿವೃದ್ದಿ ಸೇವಾ ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ ಗುಬ್ಬೇವಾಡ ಅವರು ಹೇಳಿದರು.

ಶುಕ್ರವಾರರಂದು ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಸಭಾಭವನದಲ್ಲಿ ಮಾನಸ ಪ್ರಕಾಶನ, ಶ್ರೀ ಸಂಗಮೇಶ ಗ್ರಾಮಾಭಿವೃದ್ದಿ ಸೇವಾ ಸಂಸ್ಥೆ ವಿಜಯಪೂರ, ಎಸ್.ಎಸ್.ವಿದ್ಯಾ ಸಂಸ್ಥೆ ತಾಳಿಕೋಟೆ ಇವರ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ವಜ್ರಮಹೋತ್ಸವ ಸವಿನೆನಪಿಗಾಗಿ ಸ್ವತಂತ್ರ ಭಾರತಿಗೆ ಕನ್ನಡದಾರುತಿ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದ ಅವರು ಬ್ರೀಟಿಷರ್ ಆಳ್ವಿಕೆಯಲ್ಲಿ ಸಿಲುಕಿದ್ದ ಭಾರತ ದೇಶವನ್ನು ಸ್ವತಂತ್ರಗೊಳಿಸುವ ಕೋಸ್ಕರ ಕರ್ನಾಟಕದ ಕೊಡುಗೆ ಬಹಳಷ್ಟಿದೆ ಬಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಸ್ವತಂತ್ರ ಯೋಧರು ಸಾಕಷ್ಟು ಪ್ರಯತ್ನಗಳನ್ನು ಮಾಡಿ ಒಗ್ಗೂಡಿಸುವಂತಹ ಕಾರ್ಯ ಮಾಡಿದರು, ಅದರ ಜೊತೆಗೆ ಸ್ವತಂತ್ರಕ್ಕಾಗಿ ಅನೇಕ ಸಂಗ್ರಾಮಗಳು ಕರ್ನಾಟಕದಿಂದಲೇ ಅದರಲ್ಲಿ ಉತ್ತರ ಕರ್ನಾಟಕದಿಂದಲೇ ಪ್ರಾರಂಭಗೊಂಡಿರುವದನ್ನು ನಾವು ಕೇಳುತ್ತೇವೆ ಸ್ವತಂತ್ರದ ಕಿಚ್ಚು ಹುಟ್ಟಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿಜಿ ಅವರನ್ನೊಳಗೊಂಡು ಭಗತ್‍ಸಿಂಗ್, ಉದಾಮಸಿಂಗ್, ಒಳಗೊಂಡು ಅನೇಕರು ಕೆಲಸವನ್ನು ಮುಂಚೂಣಿಯಲ್ಲಿ ನಿಂತು ಮಾಡಿದರು, ಅದರ ಜೊತೆಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ ಅವರ ಜೊತೆಗೂಡಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಭಾಗಿಯಾಗಿ ಹೋರಾಡಿದ ಯೋಧರಾಗಿದ್ದಾರೆ ಅವರನ್ನು ನೆನೆಯುವದರೊಂದಿಗೆ ಅವರ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಕಾರ್ಯ ಮಾನಸ ಪ್ರಕಾಶನದ ಮೂಲಕ 1 ತಿಂಗಳ ಪರ್ಯಂತ ಅಭಿಯಾನ ಮಾಸಾಚರಣೆಯನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ ಎಂದರು.

ಇನ್ನೋರ್ವ ಅತಿಥಿ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಸಿ.ಲಿಂಗಪ್ಪ ಅವರು ಮಾತನಾಡಿ ಸ್ವತಂತ್ರ ಹೋರಾಟದಲ್ಲಿ ತಾಳಿಕೋಟೆ ದಿ.ಶ್ರೀಶೈಲಪ್ಪ ಮಸಳಿ, ದಿ.ಸಿದ್ದಪ್ಪ ಸಜ್ಜನ, ದಿ.ಶಿವಲಿಂಗಪ್ಪ ಸಾಲಂಕಿ, ದಿ.ರಾಮಸಿಂಗ್ ಹಜೇರಿ ಅವರು ಪಾಲ್ಗೊಂಡಿದ್ದರ ಕುರಿತು ಕುರುಹುಗಳು ಸಿಕಿದ್ದರ ಕುರಿತು ತಿಳಿ ಹೇಳಿದ ಅವರು ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಯಾವತ್ತೂ ಮಲಗೋದಿಲ್ಲಾ ದೇಶಕ್ಕಾಗಿ ತನ್ನ ಜೀವಿತಾವಧಿಯವರೆಗೂ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುತ್ತಾನೆ ಎಂದು ಅನ್ನದ ಮಹತ್ವ ಕುರಿತು ವಿಧ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ಯೋಧರಾಗಿ ಹೋರಾಡಿ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ ಸ್ವಾತಂತ್ರ್ಯ ಎಂದರೆ ಕೇವಲ ಅಗಸ್ಟ 15ರಂದು ಒಂದು ದ್ವಜ ಹಾರಿಸಿ ಹೋಗುವದಲ್ಲಾ ದೇಶಾಭಿಮಾನ, ರಾಷ್ಟ್ರಾಭಿಮಾನ ಮೈಗೂಡಿಸಿಕೊಳ್ಳುವದರೊಂದಿಗೆ ಹುತಾತ್ಮ ಸ್ವಾತಂತ್ರ್ಯ ಯೋಧರ ಜೀವನ ಚರಿತ್ರೆ ತಿಳಿದುಕೊಳ್ಳುವದರೊಂದಿಗೆ ದೇಶದ ಅಭಿವೃದ್ದಿಗೆ ನಿಮ್ಮ ಕೊಡುಗೆಗಳನ್ನು ನೀಡುವದರೊಂದಿಗೆ ದೇಶ ಕಾಯುವ ಯೋಧರಾಗಿ ಹೋರ ಹೊಮ್ಮಬೇಕೆಂದರು.

ಕಾರ್ಯಕ್ರಮಕ್ಕೂ ಮುಂಚೆ ತಾಳಿಕೋಟೆಯ ಸ್ವಾತಂತ್ರ್ಯ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪರ್ಚನೆ ಮಾಡಿ ಗೌರವಿಸಲಾಯಿತು.

ಈ ಸಮಯದಲ್ಲಿ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ, ಬಿ.ಆಯ್.ಹಿರೇಹೋಳಿ, ಎಸ್.ಸಿ.ಗುಡಗುಂಟಿ, ಎಚ್.ಬಿ.ಪಾಟೀಲ, ಯು,ಎಚ್.ಗಟನೂರ, ಶ್ರೀಮತಿ ಎ.ಸಿ.ಗುಮಶೆಟ್ಟಿ, ಶ್ರೀಮತಿ ಜ್ಯೋತಿ ಪೋಲೀಸ್‍ಪಾಟೀಲ, ಮೊದಲಾದವರು ಇದ್ದರು.

ಶಿಕ್ಷಕ ಎಸ್.ವ್ಹಿ.ಜಾಮಗೊಂಡಿ ನಿರೂಪಿಸಿ ವಂದಿಸಿದರು.