ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಐಕ್ಯತೆ, ಸೇವಾ ಮನೋಭಾವ ಮೂಡಿಸಿ; ಜಿಲ್ಲಾಧಿಕಾರಿ ಸ್ನೇಹಲ್ ಆರ್

ಯಾದಗಿರಿ; ಜು, 27; ವಿದ್ಯಾರ್ಥಿಗಳ ಮುಗ್ದ ಮನಸ್ಸನ್ನು ರಾಷ್ಟ್ರೀಯ ಐಕ್ಯತೆ, ಸೇವಾ ಮನೋಭಾವ, ಸಮಾನತೆ, ಸಾಮಾಜಿಕ ಕಳಕಳಿಯಲ್ಲಿ ತೊಡಗಿಸುವಂತೆ ಮಾಡುವುದು ಉಪನ್ಯಾಸಕರ ಧ್ಯೇಯವಾಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನಿರ್ದೇಶಕರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಕಲಬುರಗಿ ಮತ್ತು ಬಳ್ಳಾರಿ ವಿಭಾಗ ಮಟ್ಟದ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ, ಮಾನವೀಯ ಮೌಲ್ಯ, ಸಾಮಾಜಿಕ ಸೇವಾ ಮನೋಭಾವನೆ ಜತೆಗೆ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಅವರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎ???ಎ???ಎಸ್) ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ವಿದ್ಯಾರ್ಥಿಗಳು ಕಾಲೇಜು ಹಂತಕ್ಕೆ ಬಂದಾಗ ಅವರಿಗೆ ಹೊಸದಾದ ಚೈತನ್ಯ ಬಂದಿರುತ್ತದೆ. ಅವರಿಗೆ ಪಠ್ಯಪುಸ್ತಕ ವಿಷಯಗಳಿಗೆ ಸೀಮಿತವಾಗದೇ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ವಿದ್ಯಾಭ್ಯಾಸದ ಕಡೆ ಗಮನ ಹರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಉಪನ್ಯಾಸಕರಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಉಪನ್ಯಾಸಕರು ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗುವಂತೆ ಇರಬೇಕು. ವಿದ್ಯಾರ್ಥಿಗಳನ್ನು ಅರ್ಥೈಸಿಕೊಂಡು ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಿ, ಅವರನ್ನು ದುಶ್ಚಟಗಳಿಂದ ದೂರವಿಡುವಂತೆ ಅವರ ಜೀವನದಲ್ಲಿ ಬದಲಾವಣೆ ತರಲು ಸಹಕಾರಿಯಾಗಿ ಮಾದರಿ ಮಾರ್ಗದರ್ಶಕರಾಗಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಕರ್ನಾಟಕ ಸರ್ಕಾರದ ರಾಜ್ಯ ಎನ್ ಎಸ್ ಎಸ್ ಅಧಿಕಾರಿಗಳಾದ ಪ್ರತಾಪ್ ಲಿಂಗಯ್ಯ ಮಾತನಾಡಿ ಪ. ಪೂ ಶಿಕ್ಷಣ ಇಲಾಖೆಯಲ್ಲಿ 800 ಘಟಕಗಳಿದ್ದು ಅವು ಶಿಸ್ತುಬದ್ದ ಸಂಘಟನೆಯಾಗಿದೆ. ವಿದ್ಯಾರ್ಥಿಗಳನ್ನು ಸಾಂಸ್ಕøತಿಕ ರಾಯಭಾರಿಗಳನ್ನಾಗಿ ನಿರ್ಮಿಸುವುದು ಎ??????ಸ್ ಕಾರ್ಯಕ್ರಮ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನರೇಂದ್ರ ಬಡ ಶೇಷಿ* ಅವರು” ವ್ಯಕ್ತಿಯು ಪರಿಸ್ಥಿತಿ ಹಾಗೂ ಪರಿಸರಕ್ಕೆ ಅನುಗುಣವಾಗಿ ಸಮಾಜದಲ್ಲಿ ಪರಿವರ್ತನೆ “ತರಬೇಕೆಂದು ಹೇಳಿದರು. ಯಾದಗಿರಿ ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ತುಂಬಾ ರಚನಾತ್ಮಕ ಕಾರ್ಯಗಳನ್ನು ಮಾಡಿ ಇದೀಗ ಯಾದಗಿರಿ ಜಿಲ್ಲಾಧಿಕಾರಿಯಾಗಿ ಜನಪರ ಮತ್ತು ಅಭಿವೃದ್ಧಿಪರ ಕಾರ್ಯನಿರ್ವಹಿಸುತ್ತಾ ಜನಮಾನಸದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ಮರಿಸ್ವಾಮಿ ಎಂ, ಡಾ. ಅಶ್ವಿನಿ ಶೆಟ್ಟಿ, ಡಾ.ಇಮ್ರಾನ್ ಪಾಷ, ಸಿ. ಕೆ. ಕುಳಗೇರಿ, ರುದ್ರಗೌಡ ಎಂ ಮಾಲಿಪಾಟೀಲ್,ಎನ್ ಎಸ್ ಎಸ್ ರಾಜ್ಯ ಸಂಯೋಜನೆ ಅಧಿಕಾರಿ ಡಾ.ಗುಬ್ಬಿಗೂಡು, ಕಲಬುರ್ಗಿ ಹಾಗೂ ಬಳ್ಳಾರಿ ವಿಭಾಗದ ಎ??????ಸ್ ವಿಭಾಗೀಯ ಅಧಿಕಾರಿಗಳಾದ ಡಾ. ಚಂದ್ರಶೇಖರ ದೊಡ್ಡಮನಿ, ಬಸಪ್ಪ ನಾ ಗೋಲಿ, ಚಂದ್ರಶೇಖರ ಡಿ,ನರಸಿಂಹರಾವ್ ಕುಲಕರ್ಣಿ, ಅಲ್ಲಾ ಪಟೇಲ್, ಸಂತೋಷಕುಮಾರ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು..