ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಕೌಶಲ್ಯ ಬೆಳೆಯಬೇಕು

ಕೋಲಾರ ಅ,೯- ನಾವು ಎಲ್ಲಿ ಹುಟ್ಟಿದ್ದೇವೆ ಎನ್ನುವುದಕ್ಕಿಂತ ಎಷ ಬೆಳೆದಿದ್ದೇವೆ ಎನ್ನುವುದನ್ನು ಮೌಲ್ಯಮಾಪನದ ಚಿಂತನೆಗೆ ಒಳಪಡಿಸುವ ಅಗತ್ಯವಿದೆ. ಈ ದೆಸೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಯುಗದಲ್ಲಿ ಬೆಳೆಯಬೇಕಾದರೆ ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ ತಿಳಿಸಿದರು.
ಕೋಲಾರ ನಗರದ ಶಂಕರ ವಿದ್ಯಾಲಯದಲ್ಲಿಂದು ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ಇನ್ಸ್ಪೈರ್ ಅವಾರ್ಡ್ ಪುರುಷ್ಕೃತರಾಗಿ ಜಪಾನಿಗೆ ತೆರಳಲಿರುವ ಅನುಶ್ರೀ ರವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ದಾಸರಾಗಬಾರದು. ವಿದ್ಯಾರ್ಥಿಗಳು ತಂದೆ-ತಾಯಿ,ಶಿಕ್ಷಕರು ಮೆಚ್ಚುವ ವಿದ್ಯಾರ್ಥಿಗಳಾಗಬೇಕು ಎಂದರು.
ಯಾವುದೇ ವಿಷಯ ಕಲಿಕೆಯ ಪೂರ್ವದಲ್ಲಿ ಆ ವಿಚಾರದ ಸಂಪೂರ್ಣ ಮಾಹಿತಿಯ ಅರಿವನ್ನು ಪಡೆಯುವುದು ಸೂಕ್ತ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ ಸ್ಪಂದಿಸಲು ವಿದ್ಯಾರ್ಥಿ ದೆಸೆಯಿಂದಲೇ ಕಲಿಯುವ ಚಿಂತನೆ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಮಹಾನ ಆದರ್ಶ ಪುರುಷರು ಪ್ರತಿ ಹಂತದಲ್ಲೂ ಕಲಿಕೆಯ ಹಸಿವನ್ನು ಹೊಂದಿದ್ದರು. ಅಬ್ದುಚಿಲ್ ಕಲಾಂ ರವರು ಕನಸನ್ನು ಕಾಣಬೇಕು ಅದನ್ನು ನನಸು ಮಾಡಲು ಸತತ ಪರಿಶ್ರಮ ಮತ್ತು ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಂಡು ಗುರಿ ಸಾಧಿಸಲು ನಿರಂತರ ಶ್ರಮಿಸಬೇಕು ಎಂದರು.
ಚಂದ್ರಯಾನ-೩ ರ ಕುರಿತ ಪ್ರಬಂಧ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಮಾಲೂರಿನ- ವಂದನಾ, ಬಂಗಾರಪೇಟೆ- ವಿಜಯಕೃಷ,ಪುಣ್ಯವತಿ, ಶ್ರೀನಿವಾಸಪುರ- ಸಾರಿಕಾ, ಉಮ್ಮೈ ನೂರಾಯಿನ್, ಕೋಲಾರ- ರಿಹಾನ್ ಖಾನ್, ಕೆ.ಜಿ.ಎಫ್ – ಸುಪ್ರಿತ ಇವರು ಪ್ರಶಸ್ತಿ ಪುರಷತರಾದರು. ಸಮಿತಿಯ ಉಪಾಧ್ಯಕ್ಷರಾದ ಕೆ.ಸಿ ಪದ್ಮಾವತಿ, ದೊಡ್ಡಬೊಮ್ಮಪಲ್ಲಿ ಕವಿತ, ವನಿತ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕಿ ರುಕ್ಮಿಣಿ, ಶಿಕ್ಷಣ ಸಂಯೋಜಕ ಕೆ.ಶ್ರೀನಿವಾಸ್, ಜಿಲ್ಲಾ ಎಸ್.ಸಿ-ಎಸ್.ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ರಾಮಾಂಜನೇಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ನಾರಾಯಣಪ್ಪ ಜಿಲ್ಲಾ ಮುಖಂಡರುಗಳಾದ ಕಾರ್ಯದರ್ಶಿ ಶರಣಪ್ಪ ಜಮಾದಾರ್, ಜಿಲ್ಲಾ ಸಂಚಾಲಕ ಡಿ.ಎನ್ ಮುಕುಂದ ಖಜಾಂಚಿ ಕೆ.ವಿ ಜಗನ್ನಾಥ ವಿವಿಧ ತಾಲ್ಲೂಕು ಅಧ್ಯಕ್ಷರುಗಳಾದ ಶ್ರೀನಿವಾಸಪುರ-ಗೋಪಿನಾಥ, ಮಾಲೂರು-ಪ್ರಶಾಂತ, ಬಂಗಾರಪೇಟೆ- ನಂಜುಂಡಪ್ಪ, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.