ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೇಡ :ರಮೇಶ್ ಬಲ್ಲಿದ

ಕಲಬುರಗಿ,ಜ.13:ಮಕ್ಕಳಲ್ಲಿ ಕೀಳರಿಮೆ, ಖಿನ್ನತೆಯಿಂದ ಹೊರಬಂದಲ್ಲಿ ಮಾತ್ರ ತಮ್ಮಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದು ರಮೇಶ್ ಬಲ್ಲಿದ ಹೇಳಿದರು.
ಕಾಯಕ ಫೌಂಡೇಶನ್ ಶಿಕ್ಷಣ ಸಂಸ್ಥೆ ವತಿಯಿಂದ ಕಾಯಕ ಸಂಭ್ರಮ 13ರ ಶಾಲಾ-ಕಾಲೇಜು ವಾರ್ಷಿಕೋತ್ಸವದಲ್ಲಿ ಹೆಡ್ ಹೆಲ್ಡ್ ಹೈ ಫೌಂಡೇಶನ್ ಮುಖ್ಯಸ್ಥರಾದ ರಮೇಶ್ ಬಲ್ಲಿದ್ ಮಾತನಾಡಿ, ಮಕ್ಕಳಲ್ಲಿ ಇರುವ ಅಗಾಧ ಶಕ್ತಿಯನ್ನು ಪಾಲಕರು ಗುರುತಿಸಿ, ಅವರ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಕರು ಸದಾ ಮಾರ್ಗದರ್ಶನ ನೀಡಬೇಕೆಂದು ಪಾಲಕರಲ್ಲಿ ಮನವಿ ಮಾಡಿದರು. .
ಮುಖ್ಯ ಅತಿಥಿಗಳಾದ ಲೋಕ ರೆಡ್ಡಿ , ಸೀನಿಯರ್ ಮ್ಯಾನೇಜರ್ ಮೈಕ್ರೋ ಇಂಡಿಯಾ ಹೈದರಾಬಾದ್ ಮಾಸ್ಟರ್ ಇನ್ ಕಂಪ್ಯೂಟರ್ ನೆಟ್ವರ್ಕ್, ಮಕ್ಕಳು ಹಿರಿಯರಿಗೆ ಸದಾ ಗೌರವ ನೀಡುವ ಸ್ವಭಾವ ಬೆಳೆಸಿಕೊಳ್ಳಬೇಕು ಹಾಗೂ ಭವಿಷ್ಯದ ಸವಾಲುಗಳನ್ನು ಎದುರಿಸಬೇಕಾದರೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಮಾತ್ರ ಸವಾಲು ಎದುರಿಸುವ ಸಾಮರ್ಥ್ಯ ಮಕ್ಕಳಲ್ಲಿ ಬರುತ್ತದೆ ಎಂದು ಹೇಳಿದರು,

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ವಿಶ್ವನಾಥ್ ಕರುಣೆಶ್ವರ ಸ್ವಾಮಿಗಳು, ಸಂಚಾಲಕರು ಶ್ರೀ ತೋಂಟದಾರ್ಯ ಅನುಭವ ಮಂಟಪ ಆಳಂದ್, ಮಾತನಾಡಿ ಮಕ್ಕಳಲ್ಲಿ ದ್ವೇಷ ಭಾವನೆಗಳನ್ನು ಬಿತ್ತದೇ ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಪ್ರೀತಿ ಕರುಣೆ ಸಹಕಾರ ಸಹಬಾಳ್ವೆ ಆದರ್ಶ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು

ಬಿಲ್ವ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರೇಣುಪ್ರಸಾದ್ ಚಿಕ್ಕಮಠ್ ಅವರು ಮಾತನಾಡಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಂದ ಮುಕ್ತವಾಗಿ ತಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಯಕ ಫೌಂಡೇಶನ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಶ್ರೀ ಶಿವರಾಜ್ ಪಾಟೀಲರು ಮಾತನಾಡಿ ಜಗತ್ತನ್ನೇ ಬದಲಾಯಿಸುವ ಪ್ರಮುಖ ಅಸ್ತ್ರವೆಂದರೆ ಶಿಕ್ಷಣ, ಶಿಕ್ಷಣವು ವ್ಯಕ್ತಿಯ ಬೆಳವಣಿಗೆಗೆ ಹಾಗೂ ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು,

ಕಾಯಕ ಫೌಂಡೇಶನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸಪ್ನಾ ರೆಡ್ಡಿ ಎಸ್ ಪಾಟೀಲ್ರು ಅಧ್ಯಕ್ಷತೆ ವಹಿಸಿದ್ದರು

ಸ್ವಾಗತ ಭಾಷಣ ವೀರೇಶ್ ಕಲಕೋರಿ, ಪಿಯುಸಿ ಪ್ರಥಮ ವರ್ಷದ ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಡಿದರು,,. ಏ .ಡಿ. ಪಾಟೀಲ್ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ನಾಗರಾಜ್ ಕಾಮ, ಗೋವಿಂದ ಕುಲಕರ್ಣಿ, ಉಪನ್ಯಾಸಕರು ಹಾಗೂ ಶಿಕ್ಷಕರು,ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು,

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಶಾಲಾ ಕಾಲೇಜು ಮಕ್ಕಳಿಂದ ದೇಶಭಕ್ತಿ ಗೀತೆ, ವಚನ ನೃತ್ಯ, ಭರತನಾಟ್ಯ, ರೂಪಕ ಹಾಗೂ ಕಿತ್ತೂರು ಚೆನ್ನಮ್ಮ ನಾಟಕ ಮನೋಸೂರೆ ಗೊಳ್ಳುವ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ವಿಜ್ರಂಬಣೆಯಿಂದ ನಡೆದವು