ವಿದ್ಯಾರ್ಥಿಗಳಲ್ಲಿ ಕನ್ನಡದ ಅರಿವು ಮೂಡಿಸಬೇಕು

ಚಿತ್ರದುರ್ಗ, ನ. 16 – ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅತ್ಯಂತ ಶ್ರೀಮಂತ ಭಾಷೆ ನಮ್ಮದು. ಜಾಗತಿಕ ಮಟ್ಟದಲ್ಲಿ ಗುರುತಿಸಿರುವ ನಲವತ್ತು ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಭವ್ಯ ಪರಂಪರೆಯನ್ನು ಹೊಂದಿರುವ ಭಾಷೆಯಾಗಿದೆ ಎಂದು ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಚರ್ಚಾಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ನಮ್ಮ ಭಾಷೆಗೆ ಶಾಸ್ತಿçÃಯ ಸ್ಥಾನಮಾನ ದೊರೆಕಿದೆ. ಇದು ನಮ್ಮ ಹೆಮ್ಮೆ. ವಿದ್ಯಾರ್ಥಿಗಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತನ್ಮೂಲಕ ಭಾಷೆಯ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ನಮ್ಮ ಭಾಷೆಯನ್ನು ಉಳಿಸೋಣ, ಬೆಳೆಸೋಣ ಎಂದರು.ಮುಖ್ಯಅತಿಥಿ ಎನ್. ಚಲುವರಾಜು ಮಾತನಾಡಿ, ನಮ್ಮ ನಾಡು ಎಂಬುದೇ ಒಂದು ಹೆಮ್ಮೆ. ನವೆಂಬರ್‌ನಲ್ಲಿ ಮಾತ್ರ ಕನ್ನಡ ನೆನಪಾಗಬಾರದು, ಪ್ರತಿನಿತ್ಯವೂ ನೆನಪಾಗಬೇಕು. ಕನ್ನಡ ಎಂದರೆ ಮೈ ರೋಮಾಂಚನವಾಗುತ್ತದೆ. ಇದು ಎಲ್ಲ ವರ್ಗ ಧರ್ಮದವರು ಪ್ರೀತಿಯಿಂದ ನಡೆಸುವ ಹಬ್ಬವಿದು. ಪ್ರತಿಯೊಂದು ವ್ಯವಹಾರದಲ್ಲೂ ಕನ್ನಡ ಹೆಚ್ಚು ಬಳಸಬೇಕು. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹನೀಯರು ತ್ಯಾಗ ಮಾಡಿದ್ದಾರೆ. ಅಭಿಮಾನ ಮಾತ್ರವಾಗದೇ ಅದು ನಮ್ಮ ಉಸಿರಾಗಬೇಕೆಂದರು.ಮತ್ತೋರ್ವ ಅತಿಥಿ ಶ್ರೀಮತಿ ದಯಾ ಪುತ್ತೂರಕರ್ ಮಾತನಾಡಿ, ಕುವೆಂಪು ಅವರ ನಾಡಗೀತೆಯೊಂದಿಗೆ ನಾಡಹಬ್ಬ ಪ್ರಾರಂಭವಾಯಿತು. ನಮ್ಮ ದೇಶದ ಸಂಸ್ಕೃತಿ ಉಳಿದುಕೊಂಡು ಹೋಗಬೇಕು. ಅನೇಕ ಸಾಂಪ್ರದಾಯಿಕ ಆಟಗಳು ನಮ್ಮ ಜಿಲ್ಲೆಯಲ್ಲಿ ಈಗಲೂ ಜೀವಂತವಾಗಿರುವುದು ಮುರುಘಾಮಠದಲ್ಲಿ ನಡೆಯುವ ಶರಣಸಂಸ್ಕೃತಿ ಉತ್ಸವದಲ್ಲಿ. ವಿದ್ಯಾರ್ಥಿಗಳಲ್ಲಿ ಕನ್ನಡದ ಅರಿವು ಮೂಡಿಸಬೇಕು ಎಂದು ಹೇಳಿದರು.ನಂತರ ನಡೆದ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದ ತೃತೀಯ ಬಿ.ಎ. ವಿದ್ಯಾರ್ಥಿ ವೇದಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ರಾಷ್ಟçಪತಿಯಾಗಿ ಸೇವೆ ಸಲ್ಲಿಸಿ ಯುವಜನತೆಗೆ ಪ್ರೇರಣೆಯಾಗಿದ್ದಾರೆ ಎಂದರು. ದ್ವಿತೀಯ ಬಿ.ಎ. ವಿದ್ಯಾರ್ಥಿ ಪೂಜಿತ ಸ್ವಚ್ಛತೆ ವಿಷಯದ ಬಗ್ಗೆ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯ ಬಗ್ಗೆ ಆಂದೋಲನವನ್ನು ರೂಪಿಸಿ ಅರಿವು ಮೂಡಿಸಿದರು. ಹಾಗಾಗಿ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು ಹಾಗು ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಕನ್ನಡ ಭಾಷೆ ಅಳಿವು-ಉಳಿವು ವಿಷಯ ಕುರಿತು ಪ್ರಿಯಾಂಕ್ ಆರ್., ನೀರಿನ ಸಂಗ್ರಹ ಮತ್ತು ಸದ್ಬಳಕೆಯ ಬಗ್ಗೆ ಚೈತ್ರ ಎನ್., ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ರಮ್ಯ, ಅರಣ್ಯ ಸಂರಕ್ಷಣೆ ಕುರಿತು ಹರ್ಷಿತ ಕೆ.ಸಿ., ಶಿಕ್ಷಣದ ಅವಶ್ಯಕತೆ ಕುರಿತು ಸುಮಯ್ಯ ಕೆ., ಯೋಗದ ಮಹತ್ವದ ಬಗ್ಗೆ ಪ್ರಿಯಾಂಕ ಪ್ರಥಮ ಬಿ.ಎ., ಹೆಣ್ಣುಮಕ್ಕಳ ರಕ್ಷಣೆ ಕುರಿತು ಕಾವ್ಯ, ಒನಕೆ ಓಬವ್ವ ಕುರಿತು ಬನಶ್ರೀ, ಸಣ್ಣಕಥೆಗಳು ಮತ್ತು ನೀತಿಕಥೆಗಳ ಪ್ರಾಮುಖ್ಯತೆ ಬಗ್ಗೆ ಪೂಜ, ಸರ್ವಪಲ್ಲಿ ರಾಧಾಕೃಷ್ಣನ್ ಬಗ್ಗೆ ಫಾತಿಮಾ ಕೌಸರ್ ಅವರುಗಳು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.