ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯ ಹೆಚ್ಚಬೇಕು : ಸತೀಶಕುಮಾರ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಜ.19:ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯ ಹೆಚ್ಚಬೇಕು. ಅಂದಾಗ ಮಾತ್ರ ಉತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ಸತೀಶಕುಮಾರ ಸಂಗಣ್ಣನವರ ಹೇಳಿದರು.

ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಮೆಟ್ಟಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ, ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ತಮ್ಮ ಮಗ ಆದಿರುಷಿ ಸತೀಷಕುಮಾರ ಹುಟ್ಟು ಹಬ್ಬ ಆಚರಿಸಿ ಮಾತನಾಡಿದ ಅವರು, ವಸತಿ ನಿಲಯದ ವಿದ್ಯಾರ್ಥಿಗಳು ಓದಿನಕಡೆ ಹೆಚ್ಚಿನ ಗಮನ ಕೊಡಬೇಕು. ಡಾ| ಬಿ.ಆರ್. ಅಂಬೇಡ್ಕರ್ ರವರ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದರೆ ಮುಂದಿನ ಜೀವನ ಸುಗಮವಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಕೆಲವು ಅಧಿಕಾರಿಗಳು ತಮ್ಮ ಮಕ್ಕಳ ಹುಟ್ಟು ಹಬ್ಬ ಸೇರಿದಂತೆ ಇತರೆ ಕಾರ್ಯಕ್ರಮಗಳು ಅದ್ಧೂರಿಯಾಗಿ ಆಚರಿಸಿ ಹಣ ಖರ್ಚುಮಾಡುತ್ತಾರೆ. ಆದರೆ ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಡ ಮಕ್ಕಳೊಂದಿಗೆ ತಮ್ಮ ಮಗನ ಹುಟ್ಟು ಹಬ್ಬ ಆಚರಿಸಿರುವುದು ಉತ್ತಮ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ದೀಪಕ ಗಾಯಕವಾಡ, ಕಿರಣಕುಮಾರ ಭಾಟಸಾಂಗವಿ, ಪ್ರವೀಣ ಸಿಂಧೆ, ಕಮಲಾಬಾಯಿ, ಶಿವರಾಜ ರಾಜಗೀರೆ, ಪ್ರದೀಪ ಜೋಳದಪಗೆ ಉಪಸ್ಥಿತರಿದ್ದರು. ನಂತರ ವಸತಿ ನಿಲಯದ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶಕುಮಾರ ಸಂಗಣ್ಣನವರ ದಂಪತಿಗಳಿಗೆ ಸತ್ಕರಿಸಲಾಯಿತು.