ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮುಖ್ಯ

ಮಾನ್ವಿ,ಜು.೦೨-
ಸಮಯಕ್ಕೆ ಮಹತ್ವ ನೀಡಿ ಅಭ್ಯಾಸ ಸಮಯದಲ್ಲಿ ಸಮಯ ಪ್ರಜ್ಞೆ ಇರಲಿ ಜೊತೆಗೆ ನಿಮ್ಮ ಗುರಿಯ ಬಗ್ಗೆ ಏಕಾಗ್ರತೆ ಇರಲಿ ಎಂದು ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಕರೆನೀಡಿದರು. ಅವರು ಇಂದು ಪಟ್ಟಣದ ನೇತಾಜಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಗೊತ್ತು ಗುರಿಯಿಲ್ಲದೇ ಬದುಕಿನಲ್ಲಿ ಸಾಗುವವರ ಸಂಖ್ಯೆ ಹೆಚ್ಚಿದೆ. ನೀವು ಹಾಗಾಗಬಾರದು ನಿರ್ಧಿಷ್ಠ ಗುರಿ ಇಟ್ಟುಕೊಳ್ಳಿ, ತಂದೆ ತಾಯಿಯನ್ನು ಗೌರವದಿಂದ ಕಾಣಿರಿ, ನೀವು ಆಯ್ಕೆ ಮಾಡಿಕೊಂಡ ಈ ನೇತಾಜಿ ಪಿ.ಯು.ಕಾಲೇಜು ಗಟ್ಟಿ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಹೆಸರಾದ ನೇತಾಜಿ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಇಲ್ಲಿಯ ಮ್ಯಾನೇಜ್ಮೆಂಟು ಹಗಲಿರುಳು ಸಂಸ್ಥೆಯ ಎಳಿಗೆಗೆ ಶ್ರಮಿಸುತ್ತಿದೆ. ಇಲ್ಲಿ ನಿಮಗೆ ಉಜ್ವಲ ಭವಿಷ್ಶವಿದೆ ಶ್ರಧ್ದೆಯಿಂದ ಮುನ್ನಡೆಯಿರಿ ಎಂದು ಹೇಳಿದ ಯಾಳಗಿಯವರು ದ್ವಿತೀಯ ಪಿ.ಯು.ಸಿ. ಇದು ಪ್ರಥಮ ಬ್ಯಾಚ್ ಆದ್ದರಿಂದ ಇಡೀ ರಾಜ್ಯದ ಗಮನ ಸೆಳೆಯುವಂತೆ ಫಲಿತಾಂಶ ತರಲು ಯತ್ನಿಸಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಕೆ.ವಿಜಯಲಕ್ಷ್ಮಿ ಮಾತನಾಡಿ ಮನರಂಜನೆಯನ್ನು ಬದಿಗೊತ್ತಿ ಅಭ್ಯಾಸದಲ್ಲಿ ತೊಡಗಿ ಆಗ ಯಶಸ್ಸು ಲಭಿಸುತ್ತದೆ. ನಮ್ಮ ಕಾಲೇಜಿನಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಬದುಕಿನ ಮಾರ್ಗದರ್ಶನ ನೀಡುತ್ತೇವೆ. ಉಪನ್ಯಾಸಕರು ಮತ್ತು ತಂದೆ ತಾಯಿಯರ ಮಾತು ಸದಾಪಾಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ವಹಿಸಿದ್ದರು.
ಆರಂಭದಲ್ಲಿ ಹೂಗುಚ್ಚ ಕೊಡುವುದರ ಮೂಲಕ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಸ್ವಾಗತಿಸಿದರು.
ವಿದ್ಯಾರ್ಥಿ ತನುಜಾ ,ಯಂಕಮ್ಮ, ಲಕ್ಷ್ಮಿ ಪ್ರಾರ್ಥಿಸಿದರು. ಚನ್ನಮ್ಮ ಸ್ವಾಗತಿಸಿದರೆ ಸಫಿಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಕೆ.ರವಿವರ್ಮಾ, ಮುಖ್ಯ ಶಿಕ್ಷಕರಾದ ಅನೀಸ್ ಫಾತಿಮಾ, ಬಸವರಾಜ್, ರಹೀಂಪಾಷಾ, ಉಪನ್ಯಾಸಕರಾದ, ಬಸನಗೌಡ, ಗುಂಡಪ್ಪ, ರಮೇಶ, ಸತ್ಯವತಿ, ಚಂದ್ರಯಜಾದವ್, ಕರೆಮ್ಮಾ,ಸದ್ದಾಂಹುಸೇನ್, ಫೆರೋಜ್, ಶಕುಂತಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.