ವಿದ್ಯಾರ್ಥಿಗಳಲ್ಲಿನ ವಿಭಿನ್ನ ಆಲೋಚನೆ ಹೊರತರಲು ವಿಜ್ಞಾನ ಮೇಳ ಅಗತ್ಯ : ಅರುಣ

ಶಹಾಪೂರ:ಜ.18:ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಆಯೋಜಿಸಿದ್ದ ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಸತಿಶಾಲೆಗಳ  ವಿಜ್ಞಾನ ಮೇಳಕ್ಕೆ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅರುಣ ರವರು ಚಾಲನೆ ನೀಡಿ ವಿದ್ಯಾರ್ಥಿಗಳ ನವ ನವೀನ ಚಿಂತನೆಯು ಹೊಸ ಆವಿಷ್ಕಾರಗಳಿಗೆ ಸಹಾಯಕ ಎಂದು  ವಿದ್ಯಾರ್ಥಿಗಳಿಗೆ ಹೇಳಿದರು .ಶಹಾಪುರ ವಿಧಾನಸಭಾ ಕ್ಷೇತ್ರದ  ಸಮಾಜಕಲ್ಯಾಣ ಇಲಾಖೆ & ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿನ ವಸತಿಶಾಲೆಗಳ  ವಿಜ್ಞಾನ ವಸ್ತುಪ್ರದರ್ಶನವನ್ನು ನಗರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು , ಇನ್ನೋರ್ವ ಸಂಪನ್ನೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಗುರುಬಸವರಾಜ ರವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಸದರಿ ಮೇಳಗಳು ಸಹಾಯಕ ಸರಕಾರದ ಈ ಕ್ರಮ ನಿಜಕ್ಕೂ ಶ್ಲಾಘನೀಯ ಸದರಿ ಮೇಳಗಳನ್ನು ನವನವೀನ ಚಿಂತನೆಯ ಮೂಲಕ ಉತ್ತಮ ಮಾದರಿ ರಚಿಸಿ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು .  ಕಾರ್ಯಕ್ರಮದಲ್ಲಿ ಸಮನ್ವಯಾಧಿಕಾರಿಗಳಾದ ಸುರಯ್ಯಾಬೇಗಂ ಹಾದಿಮನಿ , ನೋಡಲ್ ಅಧಿಕಾರಿಗಳಾದ ಶ್ರೀ ಈರಣ್ಣ ಅರಕೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸದರಿ ವಿಜ್ಞಾನ ಮೇಳದ ಮೂಲಕ ಭವಿಷ್ಯದ ಯುವವಿಜ್ಞಾನಿಗಳ ಸೃಷ್ಟಿಗೆ ಪ್ರೇರಕ ಎಂದು ಹೇಳಿದರು ,  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಪಸಂಖ್ಯಾತರ ವಸತಿಶಾಲೆ ಪ್ರಾಂಶುಪಾಲರಾದ ಶ್ರೀ ಜಟ್ಟೆಪ್ಪ ತಳವಾರ್ ರವರು ವಹಿಸಿದ್ದರು .   ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಶಂಭುಲಿಂಗ ಪಾಟೀಲ್ , ಶ್ರೀ ಶ್ರೀಶೈಲ ತಳವಾರ , ಕೆಂಭಾವಿ ಶಾಲೆಯ ಶಿಕ್ಷಕರಾದ ಮಡಿವಾಳಪ್ಪ ಹಾಗೂ ವಿವಿಧ ವಸತಿಶಾಲೆಗಳ ವಿಜ್ಞಾನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು , ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಡಿವಾಳಪ್ಪ ಪಾಟೀಲ್ಲ ಅಚ್ಚುಕಟ್ಟಾಗಿ ನೆರವೇರಿಸಿದರು.