ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಹೊರ ತರುವವರು ಶಿಕ್ಷಕರು : ಎಸ್ ಎ ಮುನಾಫ್

ಸೇಡಂ,ಸ,03: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತನ್ನದೇ ಆದ ಪ್ರತಿಭೆಯನ್ನು ಅಳವಡಿಸಿಕೊಂಡಿರುತ್ತಾರೆ ಅದನ್ನು ಗುರುತಿಸಿ ಪ್ರತಿಭಾವಂತರನ್ನು ವರತಂದು ಶಾಲೆಯಲ್ಲಿ ಕಾಲೇಜಿನಲ್ಲಿ ತರಬೇತಿ ನೀಡಿ ಒಳ್ಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪರೇಷಗೊಳಿಸುವರು ಶಿಕ್ಷಕರು ಎಂದು ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಎಸ್ ಎ ಮುನಾಫ್ ಹೇಳಿದರು. ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲಿಂದು ನಮೋ ಬುದ್ಧ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೇಲ್ ಪೇರ್ ಟ್ರಸ್ಟ್ ವತಿಯಿಂದ ಹಾಕಿ ಮಾಂತ್ರಿಕ ಕ್ಯಾಪ್ಟನ್ ಧ್ಯಾನಚಂದ್ ಅವರ ಜನ್ಮದಿನ ದಿನಾಚರಣೆ ( ರಾಷ್ಟ್ರೀಯ ಕ್ರೀಡಾ ದಿನಾಚರಣೆ) ಪ್ರಯುಕ್ತ ಶಾಲಾ ಮಕ್ಕಳಿಗೆ ಕ್ರಿಡಾ ಚಟುವಟಿಕೆಗಳಾದ ಬ್ಯಾಟ್ ಬಾಲ್, ವಾಲಿಬಾಲ್, ಇನ್ನಿತರ ಆಟಿಕೆ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆಯಲ್ಲಿ ಕನ್ಯಾ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಸಂತೋಷಕುಮಾರ್, ನಮೋ ಬುದ್ಧ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೇಲ್ ಪೇರ್ ಟ್ರಸ್ಟ್ ಅಧ್ಯಕ್ಷರಾದ ರಾಜು ಕಟ್ಟಿ,ಪ್ರೌಢಶಾಲೆಯ ಮುಖ್ಯಗುರುಗಳಾದ ಸೋಬಾ ರೆಡ್ಡಿ, ದೈಹಿಕ ಶಿಕ್ಷಕಿ ಮರೇಮ್ಮ ನಾಟಿಕರ, ಉರ್ದು ಶಾಲೆಯ ರೈಸ್ ಫಾತಿಮಾ ಮಾತನಾಡಿದರು.
ಸ್ವಾಗತ ವಂದನಾರ್ಪಣೆ ವಿಜಯಲಕ್ಷ್ಮಿ ಕುಂಬಾರ ನೇರವೇರಿಸಿದರು.


ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳು ವಿತರಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ನನ್ನ ಸಣ್ಣ ಹಳಲು ಸೇವೆ ಮಾಡುತ್ತಿದ್ದೇನೆ.

ರಾಜು ಕಟ್ಟಿ
ಅಧ್ಯಕ್ಷರು
ನಮೋ ಬುದ್ಧ ಸೇವಾ ಕೇಂದ್ರ ಚಾರಿಟೇಬಲ್ ಮತ್ತು ವೇಲ್ ಪೇರ್ ಟ್ರಸ್ಟ್ ಮಳಖೇಡ


ಮಳಖೇಡ ಗ್ರಾಮದಲ್ಲಿರುವ (ಶಾಲೆಗಳು) ಗುಣಮಟ್ಟದ ಶಿಕ್ಷಣ ಸಂಸ್ಥೆಗಳೂ ಇದರು ಶೈಕ್ಷಣಿಕವಾಗಿ ಹಿನ್ನೆಡೆಯಾಗಿದೆ ರಾಜಕಾರಣಿಗಳು ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕವಾಗಿ ಮುನ್ನಡೆಗೆ ದಾರಿದೀಪವಾಗಬೇಕಿದೆ.

ಸಂತೋಷ್ ಕುಮಾರ್
ದೈಹಿಕ ಶಿಕ್ಷಕರು ಕನ್ಯಾ ಪ್ರೌಢಶಾಲೆ
ಮಳಖೇಡ